ಸೌತ್‌ನ ನಟಿ ಸಮಂತಾರ ಮಾಜಿ ಪತಿ ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಮದುವೆಗೆ (Wedding) ದಿನಾಂಕ ನಿಗದಿಯಾಗಿದೆ. ಅದಷ್ಟೇ ಅಲ್ಲ, ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ತೆರೆಮರೆಯಲ್ಲಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು
ಈ ವರ್ಷದ ಅಂತ್ಯದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಯುತ್ತಿದೆಯಂತೆ. ಇನ್ನೂ ಇತ್ತೀಚೆಗೆ ಮಗನ ನಿಶ್ಚಿತಾರ್ಥದ ಕುರಿತು ನಾಗರ್ಜುನ ಅಕ್ಕಿನೇನಿ ಘೋಷಿಸಿದ್ದರು. ಈಗ ಮದುವೆ ಬಗ್ಗೆ ಕೂಡ ಅಧಿಕೃತ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.
ಆ.8ರಂದು ಸೈಲೆಂಟ್ ಆಗಿ ನಟಿ ಶೋಭಿತಾಗೆ ರಿಂಗ್ ತೊಡಿಸಿ ಸಮಂತಾ ಫ್ಯಾನ್ಸ್‌ಗೆ ನಾಗಚೈತನ್ಯ ಶಾಕ್ ಕೊಟ್ಟಿದ್ದರು. ಈಗ ಮದುವೆ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಇನ್ನೂ ಹಲವು ವರ್ಷಗಳು ಪ್ರೀತಿಸಿ ಸಮಂತಾರನ್ನು (Actress Samantha) 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆ ಜರುಗಿತ್ತು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು.