ತಿರುವಂತನಪುರಂ: ಇತ್ತೀಚೆಗೆ ಸಿನಿಮಾರಂಗದ ನಾಯಕರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಆಂಧ್ರ, ತಮಿಳುನಾಡು ಆಗಿ ಈಗ ಕೇರಳದ ಸರದಿಯಾಗಿದ್ದು, ರಾಜಕೀಯ ರಂಗಕ್ಕೆ ಧುಮುಕಲು ಖ್ಯಾತ ನಟ ಮೋಹನ್ ಲಾಲ್ ಸಜ್ಜಾಗಿದ್ದಾರೆ.
ಶೀಘ್ರವೇ ಮಲಯಾಳಂ ನಟ ಮೋಹನ್‍ಲಾಲ್ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಮೋಹನ್ ಲಾಲ್ ಬಿಜೆಪಿ ಸೇರ್ಪಡೆಗೆ ಆರ್‍ಎಸ್‍ಎಸ್‍ನಿಂದ ಭಾರೀ ಕಸರತ್ತು ನಡೆಯುತ್ತಿದ್ದು, ಮೋಹನ್‍ಲಾಲ್ ಮೂಲಕ ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಆದರೆ ರಾಜಕೀಯಕ್ಕೆ ಸೇರ್ಪಡೆಯಾಗುವ ಬಗ್ಗೆ ಮೋಹನ್ ಲಾಲ್ ಇದೂವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Advertisement
He has assured all support and offered to participate in the Global Malayalee Round table that can formulate futuristic solutions for a New Kerala. Hon. PMO India has also appreciated our vision to set up a Cancer Care Centre to cater to the needs of the under-privileged. pic.twitter.com/3icdyqZlgu
— Mohanlal (@Mohanlal) September 3, 2018
Advertisement
ಇತ್ತೀಚೆಗೆ ಮೋಹನ್ ಲಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಮೋಹಲ್ ಲಾಲ್ ಸರಣಿ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಕೂಡ ಟ್ವಿಟ್ಟರ್ ನಲ್ಲಿ ಮೋಹನ್ ಲಾಲ್ ಭೇಟಿ ಕುರಿತು ಬರೆದುಕೊಂಡಿದ್ದಾರೆ.
Advertisement
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿರನ್ನು ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಭೇಟಿ ಮಾಡಿದ್ದೇನೆ. ಈ ವೇಳೆ ವಿಶ್ವಶಾಂತಿ ಫೌಂಡೇಶನ್ ಹಾಗೂ ನಮ್ಮ ಬಹುಮುಖಿ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಲಾಗಿದೆ ಎಂದು ಮೋಹನ್ ಲಾಲ್ ಬರೆದುಕೊಂಡಿದ್ದಾರೆ.
Advertisement
It has been a privilege to meet our Honourable Prime Minister Shri. @narendramodi ji on this auspicious day of Janmashtami. Briefed him about @ViswaSanthiFndn and our multifaceted social initiatives. pic.twitter.com/Bj70R1g8nA
— Mohanlal (@Mohanlal) September 3, 2018
ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಅವರು ಗ್ಲೋಬಲ್ ಮಲಯಳಿ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಭಾವಹಿಸಲು ಆಹ್ವಾನ ನೀಡಿದ್ದೇನೆ. ಪ್ರಧಾನಿ ಮೋದಿ ಕೇರಳಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಮೋದಿ ಭಾರತ ವಿಶ್ವಶಾಂತಿ ಫೌಂಡೇಶನ್ ಅಡಿಯಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಅನ್ನು ಸ್ಥಾಪಿಸುವ ನಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಿರುವನಂಪುರ ಕೇಂದ್ರದ ಮಾಜಿ ಮಂತ್ರಿ ಶಶಿ ತರೂರ್ ಅವರ ಕ್ಷೇತ್ರವಾಗಿದ್ದು, 2014ರ ಚುನಾವಣೆಯಲ್ಲಿ 15,470 ಮತಗಳ ಅಂತರದಿಂದ ಜಯಗಳಿಸಿದ್ದರು. ಶಶಿ ತರೂರ್ ಅವರಿಗೆ 2,97,806 ಮತಗಳು ಬಿದ್ದಿದ್ದರೆ, ಬಿಜೆಪಿ ಸಿ. ರಾಜಗೋಪಾಲ್ ಅವರಿಗೆ 2,82,336 ಮತಗಳು ಬಿದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Yesterday, I had a wonderful meeting with @Mohanlal Ji. His humility is endearing. His wide range of social service initiatives are commendable and extremely inspiring. pic.twitter.com/f3Dv3owHUV
— Narendra Modi (@narendramodi) September 4, 2018