ಮಲಯಾಳಂ ಸ್ಟಾರ್ (Mollywood) ಮಮ್ಮುಟ್ಟಿಗೆ (Mammootty) ಕ್ಯಾನ್ಸರ್ ಆಗಿದೆ ಎಂಬ ಸುಳ್ಳು ವದಂತಿ ಹಬ್ಬಿದ ಬೆನ್ನಲ್ಲೇ ಪಿ.ಆರ್ ಟೀಮ್ ನಟನ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದೆ. ಆ ರೀತಿ ಏನು ಇಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ವದಂತಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ
ಇದು ಸುಳ್ಳು. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ರಂಜಾನ್ ಮುಗಿಯುತ್ತಿದ್ದಂತೆ ಅವರು ಶೂಟಿಂಗ್‌ಗೆ ಮರಳುತ್ತಾರೆ ಎಂದು ಪಿಆರ್ ಟೀಮ್ ಹೇಳಿದೆ. ಸುಳ್ಳು ವದಂತಿಗೆ ಕಿವಿಗೊಡಬೇಡಿ ಎಂದು ಮಮ್ಮುಟ್ಟಿ ತಂಡ ಸ್ಪಷ್ಟನೆ ನೀಡಿದೆ.
ಅಂದಹಾಗೆ, 73 ವರ್ಷದ ನಟ ಮಮ್ಮುಟ್ಟಿಗೆ ಕ್ಯಾನ್ಸರ್ ಆಗಿದೆ, ಹೀಗಾಗಿ ಅವರು ಸಿನಿಮಾ ಶೂಟಿಂಗ್‌ನಿಂದ ದೂರ ಇದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ನಟನ ಫ್ಯಾನ್ಸ್ ಗಾಬರಿಯಾಗಿದ್ದರು. ಆದರೀಗ ಅವರು ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.