ಜೆರುಸಲೆಂ: ಇಸ್ರೇಲ್- ಪ್ಯಾಲೆಸ್ಟೈನ್ (Isreal- Palestine) ನಡುವೆ ಯುದ್ಧ ಜೋರಾಗಿದೆ. ಬಹುತೇಕ ಯುದ್ಧ ವಾಯು ಮಾರ್ಗದ ಮೂಲಕವೇ ನಡೆಯುತ್ತಿದೆ. ಇದೀಗ ಇಸ್ರೇಲ್‍ನಲ್ಲಿ ಹಮಾಸ್ ಬಂಡುಕೋರರ ಅಟ್ಟಹಾಸಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.
View this post on Instagram
ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ (Madhura Naik) ಕುಟುಂಬಸ್ಥರನ್ನು ಇಸ್ರೇಲ್‍ನಲ್ಲಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ನಟಿ ಮಧುರಾ ನಾಯ್ಕ್ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಮತ್ತು ಆಕೆಯ ಪತಿಯನ್ನು ಹಮಾಸ್ (Hamas Terrorists) ಬಂಡೋಕೋರರು ಹತ್ಯೆ ಮಾಡಿದ್ದಾರೆ. ಮಕ್ಕಳ ಎದುರೇ ಅವರನ್ನು ಕೊಲ್ಲಲಾಗಿದೆ ಎಂದುನಟಿ ಮಧುರಾ ನಾಯಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.
ಒಟ್ಟಿನಲ್ಲಿ ಒಂದು ಕಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟೈಕ್ ಮಾಡುತ್ತಿದೆ. ಇಸ್ರೇಲ್‍ನ ಅಶ್ಕೆಲೋನ್ ಮೇಲೆ ಬುಧವಾರ ಹಮಾಸ್ ರಾಕೆಟ್ ದಾಳಿ ಮಾಡಿತ್ತು ಆದರೆ ಇಸ್ರೇಲ್‍ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್‍ಗಳನ್ನು ತಡೆದು ಗಾಳಿಯಲ್ಲಿ ಅವುಗಳನ್ನು ನಾಶ ಮಾಡಲಾಗಿದೆ. ಇದನ್ನೂ ಓದಿ: ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ
ಇಸ್ರೇಲ್‍ನಲ್ಲಿ ಮೂವರು ಕೆನಡಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ. ಇಸ್ರೇಲ್, ಗಾಜಾ ಮತ್ತು ವೆಸ್ಟ್‍ಬ್ಯಾಂಕ್‍ನಲ್ಲಿ 4,700ಕ್ಕೂ ಹೆಚ್ಚು ಕೆನಡಾದ ನಾಗರಿಕರು ಮತ್ತು ಖಾಯಂ ನಿವಾಸಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆರು ಜನರ ಸಂಪರ್ಕ ಇಲ್ಲ ಎಂದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

