ಬೆಂಗಳೂರು: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು.
ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ
ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ರೋಡ್ ಶೋನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.