ಗಂಡು ಮಗುವಿನ ತಂದೆಯಾದ ನಟ ಲೋಕೇಶ್

Public TV
1 Min Read
rachana dashrath

ಕಿರುತೆರೆ ಮತ್ತು ಹಿರಿತೆರೆಯ ನಟ ಲೋಕೇಶ್ ಬಸವಟ್ಟಿ (Lokesh Basavatti) ಗಂಡು ಮಗುವಿನ (Baby boy) ತಂದೆಯಾಗಿದ್ದಾರೆ. ನಿನ್ನೆಯಷ್ಟೇ ಲೋಕೇಶ್ ಅವರ ಪತ್ನಿ ರಚನಾ ದಶರಥ್ (Rachana Dashrath) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಭ್ರಮದ ಸಂಗತಿಯನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

rachana dashrath

ಪತ್ನಿ ರಚನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ. ಜನವರಿ 27 ರಂದು ಚಾಮರಾಜ ನಗರದಲ್ಲಿರುವ ಅನುಭವ ಮಂಟಪದಲ್ಲಿ ರಚನಾ ಮತ್ತು ಲೋಕೇಶ್ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮೊನ್ನೆಯಷ್ಟೇ ರಚನಾ ಅವರ ಸೀಮಂತ ಶಾಸ್ತ್ರವನ್ನೂ ಮಾಡಲಾಗಿತ್ತು.

rachana dashrath

ಲೋಕೇಶ್ ಮತ್ತು ರಚನಾ ಒಟ್ಟಿಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಗೌರಿಪುರದ ಗಯ್ಯಾಳಿಗಳು ಧಾರಾವಾಹಿಯಲ್ಲಿ ಇಬ್ಬರು ಪರಿಚಯವಾಗಿ, ಸ್ನೇಹವಾಗಿ ನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ. ಎರಡೂ ಕುಟುಂಬಗಳು ಒಪ್ಪಿ, ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು.

 

ರಚನಾ ದಶರಥ್ ನೇಪಾಳ ಮೂಲದವರಾದರೂ, ಕನ್ನಡದಲ್ಲೇ ನೆಲೆಯೂರಿದ್ದಾರೆ. ಚಾಮರಾಜನಗರದ ಲೋಕೇಶ್ ಬಣ್ಣದ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಬೆಂಗಳೂರಿಗೆ ಬಂದವರು. ಇಬ್ಬರೂ ಸಿನಿಮಾ ಮತ್ತು ಧಾರಾವಾಹಿ ಲೋಕದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

Web Stories

Share This Article