ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಮೊದಲ ಬಾರಿಗೆ ದರ್ಶನ್ (Darshan) ಪ್ರಕರಣದ ಕುರಿತು ಬಹುಭಾಷಾ ನಟ ಕಿಶೋರ್ (Actor Kishore) ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾಗೆ ಡಾಲಿ ನೋ ಎಂದಿದ್ದೇಕೆ?
ತನಿಖೆ ನಡೆಯುತ್ತಿದೆ. ಹೈಪ್ರೊಫೈಲ್ ಕೇಸ್ ಆಗಿರೋದ್ರಿಂದ ಗಮನ ಕೊಟ್ಟು ತನಿಖೆ ಮಾಡುತ್ತಾರೆ. ಆಗಬಾರದ ಕೆಲಸ ಆಗೋಗಿದೆ ಬಗೆಹರಿಸಬೇಕು ಎಂದಿದ್ದಾರೆ ಕಿಶೋರ್. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಖಂಡಿತಾ ಪರಿಣಾಮ ಬಿರುತ್ತದೆ. ಇನ್ನು ಈ ಕೇಸ್ ತನಿಖೆ ಹಂತದಲ್ಲಿದೆ. ಕೋರ್ಟ್‌ನಲ್ಲಿದೆ. ಹಾಗಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ಬಗ್ಗೆ ಮಾತಾಡೋದು ಸೂಕ್ತವಲ್ಲ. ರೇಣುಕಾಸ್ವಾಮಿ ದುಡಿಯುವ ವ್ಯಕ್ತಿಯಾಗಿದ್ದರು. ಅವರು ಇಲ್ಲ ಅಂದ್ಮೇಲೆ ಆ ಕುಟುಂಬ ಬೀದಿಗೆ ಬಂದ ಹಾಗೆ ಎಂದು ಕಿಶೋರ್ ಮಾತನಾಡಿದ್ದಾರೆ.
ಬೇರೆ ನಟರ ಸಿನಿಮಾ ನೋಡಲ್ಲ ಎನ್ನುವ ದರ್ಶನ್ ಫ್ಯಾನ್ಸ್‌ಗೆ ಕಿಶೋರ್ ಕಿವಿಹಿಂಡಿದ್ದಾರೆ. ಸಿನಿಮಾವನ್ನ ಸಿನಿಮಾವಾಗಿ ನೋಡುವ ಅಭ್ಯಾಸವನ್ನ ಪ್ರೇಕ್ಷಕರು ನಾವು ಬೆಳೆಸಿಕೊಳ್ಳಬೇಕು. ಅಭಿಮಾನಿಗಳನ್ನು ಕೇವಲ ಮನರಂಜನೆಗಾಗಿ ಬಳಸಿಕೊಳ್ಳದೇ ಪ್ರಜ್ಞಾವಂತರನ್ನಾಗಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗುತ್ತದೆ. ಸಿನಿಮಾನೇ ಬೇರೆ ನಿಜ ಜೀವನವೇ ಬೇರೆಯಾಗಿರುತ್ತದೆ ಎಂದು ಕಿಶೋರ್ ಮಾತನಾಡಿದ್ದಾರೆ.
ಅಂದಹಾಗೆ, ಕನ್ನಡದ ಜೊತೆ ಪರಭಾಷೆಯ ಸಿನಿಮಾದಲ್ಲೂ ಕಿಶೋರ್‌ಗೆ ಭಾರೀ ಬೇಡಿಕೆ ಇದೆ. ಕಾಂತಾರ, ಜೈಲರ್ ಸಿನಿಮಾದ ಸಕ್ಸಸ್ ನಂತರ ಕಿಶೋರ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ.