ಕನ್ನಡದ ನಟ ಕಿಶೋರ್ (Kishore) ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ‘ಆಚಾರ್ & ಕೋ’ (Achar & Co) ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ (Sindhu Srinivas Murthy) ನಿರ್ದೇಶನದಲ್ಲಿ ನಟಿಸಲು ಕಿಶೋರ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ
ಸಾವು, ಅಂತ್ಯಸಂಸ್ಕಾರ ಮತ್ತು ಅನುಸರಿಸುವ ಆಚರಣೆಗಳ ವಿಷಯದ ಬಗ್ಗೆ ಕಥೆ ಹೇಳಲು ಕಿಶೋರ್ ಹೊರಟಿದ್ದಾರೆ. ವಿಭಿನ್ನ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. 13 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಇಲ್ಲಿ ಕಿಶೋರ್‌ಗೆ ಮಹಿಳಾ ನಿರ್ದೇಶಕಿ ಸಿಂಧು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್
ಇತ್ತೀಚೆಗೆ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ನಿರ್ದೇಶನದ ಚೊಚ್ಚಲ ಸಿನಿಮಾಗೆ ಕಿಶೋರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ಮಹಿಳಾ ನಿರ್ದೇಶಕಿ ಜೊತೆ ಅವರು ಕೈಜೋಡಿಸಿದ್ದಾರೆ. ಹಾಗಾಗಿ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಅಂದಹಾಗೆ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ (Sikandar) ಸಿನಿಮಾದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಮಾ.30ರಂದು ಈ ಚಿತ್ರ ರಿಲೀಸ್ ಆಗಿದ್ದು, ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.