ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ಚೈತ್ರಾ ಆಚಾರ್, ಅಂತಃಪುರದ ರಾಣಿಯಾಗಿ ಕಂಗೊಳಿಸಿದಲ್ಲದೇ ಹೀರೋ ಕಿಶನ್ ಬಿಳಗಲಿ (Kishen Bilagali) ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರ ಡ್ಯುಯೇಟ್ ಸಾಂಗ್ ವೈರಲ್ ಆಗಿದೆ.
Advertisement
ಟೋಬಿ ನಟಿ ಆಗಾಗ ಹೊಸ ಪರಿಕಲ್ಪನೆಯ ಫೋಟೋಶೂಟ್ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಾರೆ. ಮತ್ತೆ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ, ಇದೀಗ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚೈತ್ರಾ ಬ್ಯೂಟಿಗೆ ಮತ್ತು ಡ್ಯಾನ್ಸ್‌ಗೆ ಡ್ಯಾನ್ಸರ್ ಕಿಶನ್ ಪಾಗಲ್ ಆಗಿದ್ದಾರೆ. ಇದನ್ನೂ ಓದಿ:ಮೃಣಾಲ್ ಬ್ಯೂಟಿ ಬಗ್ಗೆ ಬಣ್ಣಿಸಿದ ವಿಜಯ್ ದೇವರಕೊಂಡ
Advertisement
Advertisement
ರಣ್‌ಬೀರ್ ಕಪೂರ್ (Ranbir Kapoor), ತೃಪ್ತಿ ದಿಮ್ರಿ (Tripti Dimri) ನಟನೆಯ ‘ಅನಿಮಲ್’ (Animal) ಚಿತ್ರದ ಹಾಡಿಗೆ ರೊಮ್ಯಾಂಟಿಕ್ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಶೃಂಗಾರದ ಹಲವು ಸ್ಟೇಪ್ಸ್ ಹಾಕುವ ಮೂಲಕ ಈ ಜೋಡಿ ನೋಡುಗರ ಗಮನ ಸೆಳೆದಿದೆ. ಬಿಳಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಕರ್ಷಕವಾಗಿ ಹೆಜ್ಜೆ ಹಾಕುವ ಮೂಲಕ ಕಿಶನ್ ಮತ್ತು ಚೈತ್ರಾ ಸೈ ಎನಿಸಿಕೊಂಡಿದ್ದಾರೆ.
Advertisement
ಈ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇಬ್ಬರ ಜೋಡಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಿಯಲ್ ಹಾಡನ್ನೇ ಮೀರಿಸುವಂತಿದೆ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
ನಟಿ ಚೈತ್ರಾ ಆಚಾರ್ ಇತ್ತೀಚೆಗೆ ನಟಿಸಿದ ‘ಟೋಬಿ’ (Toby Film) ಸಿನಿಮಾ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಎಲ್ಲರ ಗಮನ ಸೆಳೆದಿತ್ತು. ಕನ್ನಡದ ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ನಾಯಕಿ ಬ್ಯುಸಿಯಾಗಿದ್ದಾರೆ.