ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ- ಚಂದನವನಕ್ಕೆ ಕಾಲಿಟ್ಟ ಅಳಿಯನಿಗೆ ಸುದೀಪ್ ಕಿವಿಮಾತು

Public TV
1 Min Read
SANCHIT SUDEEP 1

ನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್ (Sandalwood) ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ.

ಸುದೀಪ್ ಸಹೋದರಿಯ ಮಗ ಸಂಚಿತ್ ಸಂಜೀವ್ ‘ಜಿಮ್ಮಿ’ (Jimmy) ಯಾಗಿ ಚಂದನವನದ ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ವೇಳೆ ಮಾತನಾಡಿದ ಸುದೀಪ್, ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜೊತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

SANCHIT SUDEEP 1 1

ಜಿಮ್ಮಿ ಚಿತ್ರದಲ್ಲಿ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ಮಗಳು ಹಾಡಿದ್ದು ಖುಷಿಯಾಯ್ತು. ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತಿತ್ತು. ಇಷ್ಟು ಚೆನ್ನಾಗಿ ಅಂತ ಇವತ್ತೇ ಗೊತ್ತಾಗಿದ್ದು. ವಾಸುಕಿ ವೈಭವ್ ಧ್ವನಿಯನ್ನ ಇನ್ನೂ ತಿದ್ದಿ ಇಂಪಾಗಿ ಹಾಡುವಂತಾಯ್ತು ಎಂದರು. ಇದನ್ನೂ ಓದಿ: ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ

ಇದೇ ವೇಳೆ ನಟ ಸಂಚಿತ್ ಸಂಜೀವ್ ಮಾತನಾಡಿ, ಮಾತು ಬರ್ತಿಲ್ಲ. ಒಂದ್ಕಡೆ ಭಯ, ನರ್ವಸ್ ಇದೆ. ಹಾಗೆಯೇ ಎಕ್ಸೈಟ್ಮೆಂಟ್ ಕೂಡ ಇದೆ. ಒಂದು ಮಾತು ಹೇಳಬೇಕಂದರೆ ನಿಮ್ಮ ನಂಬಿಕೆ ಉಳಿಸಿಕೊಳ್ತೀನಿ. ಸುದೀಪ್ ಮಾಮರಿಂದ ಬಹಳ ಕಲಿತಿದ್ದೇನೆ. ಅವರ ಶ್ರಮ, ಪ್ರೀತಿ ನೋಡಿದ್ದೀನಿ. ಏನೇ ಮಾಡಿದ್ರೂ 100% ಎಫರ್ಟ್ ಹಾಕಬೇಕು ಅನ್ನೋದನ್ನು ಮಾಮ ಹೇಳುತ್ತಿರುತ್ತಾರೆ. ಜಿಮ್ಮಿ ಯಾರಿಗೂ ಇಲ್ಲ ಕಮ್ಮಿ ಎಂದು ಹೇಳಿದರು.

Share This Article