ಬೆಂಗಳೂರು: ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಹೆಚ್ಚು ಫಾಲೋವರ್ಸ್ ಪಡೆದು ದಾಖಲೆ ಬರೆದಿದ್ದರು. ಆದರೆ ಈಗ ಇನ್ಸ್ಟಾಗ್ರಾಂ ಖಾತೆ ತೆರೆದು ಕೆಲವೇ ಸಮಯದಲ್ಲಿ 2 ಲಕ್ಷ ಫಾಲೋವರ್ಸ್ ಪಡೆದು ಸ್ಯಾಂಡಲ್ ವುಡ್ನಲ್ಲಿ ದಾಖಲೆ ಬರೆದಿದ್ದಾರೆ.
ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ದಿನನಿತ್ಯ ತಮ್ಮ ಅಭಿಮಾನಿಗಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ. ಕಿಚ್ಚ ಟ್ವಿಟ್ಟರಿನಲ್ಲಿ ಹೆಚ್ಚು ಸಕ್ರಿಯರಾದಷ್ಟು ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರಲಿಲ್ಲ.
Advertisement
Advertisement
Advertisement
ಸುದೀಪ್ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಪೋಸ್ಟ್ ಹಾಕುತ್ತಿರಲಿಲ್ಲ. ಕೇವಲ ಬಿಗ್ ಬಾಸ್ ಕಾರ್ಯಕ್ರಮ, ದಿ ವಿಲನ್ ಸೇರಿದಂತೆ ತಮ್ಮ ಸಿನಿಮಾಗಳ ಮಾಹಿತಿಯನ್ನು ತಮ್ಮ ಖಾತೆಯನ್ನು ಹಂಚಿಕೊಂಡಿದ್ದಾರೆ.
Advertisement
ಸ್ಯಾಂಡಲ್ ವುಡ್ನಲ್ಲಿ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿ ದಾಖಲೆ ಬರೆದಿದ್ದು, ಆದರೆ ಈಗ ಇನ್ಸ್ಟಾಗ್ರಾಂ ಖಾತೆ ತೆರೆದು ಸ್ವಲ್ಪ ಸಮಯದಲ್ಲೇ 2,01,674 ಫಾಲೋವರ್ಸ್ ಹೊಂದಿ ದಾಖಲೆ ಮಾಡಿದ್ದಾರೆ.
ಸದ್ಯ ಸುದೀಪ್ರನ್ನು ಟ್ವಿಟ್ಟರಿನಲ್ಲಿ 19,73,087ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.