ಬೆಂಗಳೂರು: ಸಿನಿಮಾ, ಬಿಗ್‍ಬಾಸ್ ಶೋ ಅಂತ ಅದೇನೇ ಬ್ಯುಸಿಯಾಗಿದ್ದರೂ ಕ್ರಿಕೆಟ್ ಅನ್ನು ಮಾತ್ರ ತಪ್ಪಿಸದೇ ನೋಡುವವರು ಕಿಚ್ಚ ಸುದೀಪ್. ನಟನೆ ಬಿಟ್ಟರೆ ಕ್ರಿಕೆಟ್ ಅವರ ಆಸಕ್ತಿಯ ಕ್ಷೇತ್ರ. ಇದೀಗ ಅವರು ಟೀಂ ಇಂಡಿಯಾಗೆ ಆಯ್ಕೆಯಾಗಿ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿರುವ ಕ್ರಿಕೆಟರ್ ಮಯಾಂಕ್ ಅಗರ್ವಾಲ್ ರನ್ನು ಅಭಿನಂದಿಸಿದ್ದಾರೆ. ಇದೇ ಫೋರ್ಸ್ ನೊಂದಿಗೆ ಮುಂದುವರೆಯುವಂತೆ ಸ್ಫೂರ್ತಿಯನ್ನೂ ತುಂಬಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯಾಟದಲ್ಲಿ ಮಾಯಾಂಕ್ 76 ರನ್ ಗಳಿಸಿ ಕ್ರಿಕೆಟ್ ಪ್ರೇಮಿಗಳನ್ನು ಖುಷಿಗೊಳಿಸಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಈ ಅಮೋಘ ಸಾಧನೆಯನ್ನು ಸುದೀಪ್ ಟ್ವಿಟ್ಟರ್ ಮೂಲಕ ಕೊಂಡಾಡಿದ್ದಾರೆ. ನಿಮ್ಮ ಆಟ ನಿಜಕ್ಕೂ ರೋಚಕವಾಗಿತ್ತು. ಅದ್ಭುತವಾಗಿ ಆಡಿದ್ದೀರಿ. ಇಂಥಾ ಹತ್ತಾರು ಟೂರ್ನಿಗಳನ್ನ ನೀವು ಗೆಲ್ಲುವಂತಾಗಲಿ ಅಂತ ಕಿಚ್ಚ ಹಾರೈಸಿದ್ದಾರೆ.
ಮಯಾಂಕ್ ಅಗರ್ವಾಲ್ ಕರ್ನಾಟಕದ ಹುಡುಗ. ಆರಂಭದಲ್ಲಿ ಇವರನ್ನು ಟೀಮಿನಿಂದ ಕೈ ಬಿಡಲಾಗಿತ್ತು. ಆದರೆ ಪೃಥ್ವಿ ಗಾಯ ಗೊಂಡಾಗ ಕೊನೆಯ ಎರಡು ಟೆಸ್ಟ್ ಪಂದ್ಯಾಟಗಳಿಗಾಗಿ ಮಯಾಂಕ್ ರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ಚೆಂದಗೆ ಬಳಸಿಕೊಂಡ ಮಯಾಂಕ್ ಗೆ ಎಲ್ಲೆಡೆಯಿಂದ ಅಭಿನಂದನೆಗಳು ಬರುತ್ತಿವೆ. ಈ ಕನ್ನಡದ ಹುಡುಗನ ಸಾಧನೆಯನ್ನು ಕಿಚ್ಚ ಕೂಡಾ ಈ ಮೂಲಕ ಮೆಚ್ಚಿಕೊಂಡಿದ್ದಾರೆ.
Congrats my fav @mayankcricket
Awesome start to a career,,, wshn u the best always Champ,,,,,,
So so so thrilled…. ????????????????????…..
Cheerssssssss
— Kichcha Sudeepa (@KicchaSudeep) December 26, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv