ಕಿರುತೆರೆ ಆಯ್ತು ಇದೀಗ ಬೆಳ್ಳಿತೆರೆಯಲ್ಲಿ ಹೊಸ ಪರ್ವ ಶುರು ಮಾಡಲು ನಟ ಅನಿರುದ್ಧ(Aniruddha) ಅವರು ರೆಡಿಯಾಗಿದ್ದಾರೆ. ‘ಶೆಫ್ ಚಿದಂಬರನಾಗಿ’ (Chef Chidambara) ಜೊತೆ ಜೊತೆಯಲಿ ಹೀರೋ ಬರುತ್ತಿದ್ದಾರೆ. ಅನಿರುದ್ಧ ಹೊಸ ಹೆಜ್ಜೆಗೆ ಕಿಚ್ಚ ಸುದೀಪ್ (Kiccha Sudeep) ಕೂಡ ಸಾಥ್ ನೀಡಿದ್ದಾರೆ. ಇತ್ತೀಚಿಗೆ ಸಿನಿಮಾದ ಅದ್ದೂರಿ ಮುಹೂರ್ತ ನೆರವೇರಿತ್ತು. ಈಗ ಚಿತ್ರದ ಟೈಟಲ್ ರಿವೀಲ್ ಆಗಿದೆ.
Advertisement
ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ಆರ್ಯನಾಗಿ ಅನಿರುದ್ಧ ಟಿವಿ ಲೋಕದ ಮನೆಮಾತಾದರು. ಈ ಹಿಂದೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದ ಅನಿರುದ್ಧ ಅವರು ಐದು ವರ್ಷಗಳ ನಂತರ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗುತ್ತಿದ್ದಾರೆ. ‘ರಾಘು’ (Raghu) ಚಿತ್ರದ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಈ ಮೊದಲೇ ಘೋಷಣೆ ಮಾಡಲಾಗಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ ‘Chef ಚಿದಂಬರ’ (Chef Chidambara) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಟೈಟಲ್ ಅನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ
Advertisement
Advertisement
ನಟ ಅನಿರುದ್ಧ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಆಗಸ್ಟ್ 10ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಡಾರ್ಕ್ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದೆ. ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ.
Advertisement
ಅನಿರುದ್ಧ ನಾಯಕಿಯರಾಗಿ ಪಂಚರಂಗಿ ಸುಂದರಿ ನಿಧಿ ಸುಬ್ಬಯ್ಯ(Niddhi Subbaih), ಲವ್ ಮಾಕ್ಟೈಲ್ 2 ಖ್ಯಾತಿಯ ರಾಚೆಲ್, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಲಿದ್ದಾರೆ. ಒಂದು ಸುಂದರ ಪ್ರೇಮಕಥೆ ಜೊತೆ ಹೊಸ ಲುಕ್‌ನಲ್ಲಿ ಅನಿರುದ್ಧ ಅವರನ್ನ ಕಣ್ತುಂಬಿಕೊಳ್ಳಬಹುದಾಗಿದೆ.