ಪಾಟ್ನಾ: ಇಲ್ಲಿನ ರೈಲು ನಿಲ್ದಾಣದ (Patna Railway Station) ಟಿವಿ ಪರದೆಯ (TV Screens) ಮೇಲೆ `ನೀಲಿ ಚಿತ್ರ’ ಪ್ರಸಾರವಾಗಿರುವುದು ಘಟನೆ ಬೆಳಕಿಗೆ ಬಂದಿತ್ತು.
ಭಾನುವಾರ ಸುಮಾರು 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದರು. ರೈಲ್ವೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿತ್ತು. ಇದನ್ನೂ ಓದಿ: ದೆಹಲಿ ಹೊಸ ಮದ್ಯ ನೀತಿ ಹಗರಣ – ಕೆ. ಕವಿತಾ ಮೊಬೈಲ್ ವಶಕ್ಕೆ ಪಡೆದ ಇಡಿ
Advertisement
It was ur Video, did u know this ????????
— Arman (@PlayBold69) March 20, 2023
Advertisement
ಟಿವಿ ಪರದೆಯ ಮೇಲೆ ವೀಡಿಯೋ ಪ್ರಸಾರದ ದೃಶ್ಯವನ್ನು ಕೆಲವರು ವೀಡಿಯೋ ಮಾಡಿ, ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ನೆಟ್ಟಿಗನೊಬ್ಬ ಇದು ನಿಮ್ಮ ವೀಡಿಯೋ, ನಿಮಗೆ ತಿಳಿದಿದೆಯೇ? ಎಂದು ಪೋರ್ನ್ ಸ್ಟಾರ್ ಕೇಂದ್ರ ಲಸ್ಟ್ಗೆ ಟ್ಯಾಗ್ ಮಾಡಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಲಸ್ಟ್ ಹೌದು.. ಅದು ನನ್ನದೇ ಎಂದು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾಳೆ.
Advertisement
ಅಲ್ಲದೇ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಂಡಿಯಾ ಎಂದು ಟೈಪ್ ಮಾಡಿದ್ದು ಹಾಟ್ ರಾಷ್ಟ್ರಧ್ವಜದ ಸಿಂಬಲ್ ಹಾಗೂ ಬಿಹಾರ್ ರೈಲ್ವೆಸ್ಟೇಷನ್ ಹ್ಯಾಶ್‌ಟ್ಯಾಗ್‌ನೊಂದಿಗೆ (#BiharRailwayStation) ತನ್ನ ಹಾಟ್‌ಫೋಟೋವನ್ನ ಹಂಚಿಕೊಂಡಿದ್ದಾಳೆ. ಈ ಚಿತ್ರ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: ನಟಿ ಕಿರಣ್ ಖೇರ್ ಗೆ ಕೋವಿಡ್ : ಆತಂಕದಲ್ಲಿ ಬಾಲಿವುಡ್
Advertisement
ಏನಿದು ಘಟನೆ?
ಮಾರ್ಚ್ 19ರ ಸಂಜೆ ಜನನಿಬಿಡವಾಗಿದ್ದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ 10ರಲ್ಲಿ ಬ್ಲೂ ಫಿಲ್ಮ್ ಪ್ರಸಾರ ಆಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀರು, ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದರು. ಇಷ್ಟಾಗುವ ವೇಳೆಗೆ 3 ನಿಮಿಷಗಳ ಕಾಲ ಪ್ಲೇ ಆದ ಪೋರ್ನ್ ವೀಡಿಯೋ ನಂತರ ಬಂದ್ ಆಯಿತು. ಬಳಿಕ ಎಂದಿನಂತೆ ರೈಲುಗಳ ಆಗಮನ, ನಿರ್ಗಮನ ಮಾಹಿತಿ ಪ್ರಸಾರವಾಯಿತು.
ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು, ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಖಾಸಗಿ ಏಜೆನ್ಸಿಯ ಹಲವರನ್ನು ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಇದ್ದ ಟಿವಿ ಆಪರೇಟರ್‌ಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.