ಚೆನ್ನೈ: ತಮಿಳುನಾಡಿನಲ್ಲಿ ತೆಲುಗು ಮಾತನಾಡುವವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ನಟಿ ಕಸ್ತೂರಿ ಶಂಕರ್ (Kasthuri Shankar) ಅವರನ್ನ ಹೈದರಾಬಾದ್ ಪೊಲೀಸರು (Hyderabad Police) ಶನಿವಾರ (ಇಂದು) ಚೆನ್ನೈನಲ್ಲಿ ಬಂಧಿಸಿದ್ದಾರೆ.
ನಟಿ ಕಸ್ತೂರಿ ಶಂಕರ್ ವಿರುದ್ಧ ಕೆಲ ದಿನಗಳ ಹಿಂದೆ ಚೆನ್ನೈ (Chennai) ಸೇರಿದಂತೆ ತಮಿಳುನಾಡಿನ ಇನ್ನೂ ಕೆಲವು ಕಡೆ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್ ರಾಜ್ಯ ಬಿಟ್ಟು ಪರಾರಿಯಾಗಿದ್ದರು. ಅದರ ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರಾದರೂ ಸಹ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಬೆನ್ನಲ್ಲೇ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್
Advertisement
Advertisement
ಇದೇ ತಿಂಗಳ ನವೆಂಬರ್ 3ರಂದು ʻಹಿಂದೂ ಮಕ್ಕಳ್ ಕಚ್ಚಿʼಯ ಸಭೆಯಲ್ಲಿ 50 ವರ್ಷ ವಯಸ್ಸಿನ ನಟಿಯ ಹೇಳಿಕೆ ಕುರಿತು ತಮಿಳುನಾಡಿನ ಬಿಜೆಪಿ ರಾಷ್ಟ್ರೀಯ ಸಹ ಉಸ್ತುವಾರಿ ಡಾ.ಪೊಂಗುಲೇಟಿ ಸುಧಾಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಆ ನಂತರ ನವೆಂಬರ್ 6ರಂದು ನನ್ನ ಹೇಳಿಕೆ ಹಿಂಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದರು. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್ ಟೈಸನ್ – ಜೇಕ್ ಪಾಲ್ ವಿರುದ್ಧ ಸೋಲು
Advertisement
ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ನಟಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಟಿಯ ಹೇಳಿಕೆಗಳು ದ್ವೇಷ ಭಾಷಣದಿಂದ ಕೂಡಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಮುನ್ನ ಎರಡು ಬಾರಿ ಯೋಚಿಸಬೇಕು ಎಂದು ಪೀಠ ಹೇಳಿತ್ತು. ಅಲ್ಲದೇ ಕ್ಷಮೆ ಕೇಳಿದ ಮಾತ್ರಕ್ಕೆ ಇಂತಹ ಕ್ರಮಗಳಿಂದ ವಿನಾಯ್ತಿ ನೀಡಲಾಗುವುದಿಲ್ಲ ಎಂದೂ ಕೋರ್ಟ್ ಹೇಳಿತ್ತು.
Advertisement
ತೆಲುಗು ಮಂದಿ:
ಕಸ್ತೂರಿ ಶಂಕರ್ ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಈ ಬ್ಯೂಟಿ ರವಿಚಂದ್ರನ್ ಜೊತೆ ಜಾಣ, ರಮೇಶ್ ಜೊತೆ ತುತ್ತಾ ಮುತ್ತಾ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ದೂರಾದ ನಂತರವೂ ಕಸ್ತೂರಿ ಶಂಕರ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರು ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಸ್ತೂರಿ ಶಂಕರ್ ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಅಖಿಲ ಭಾರತ ತೆಲುಗು ಒಕ್ಕೂಟ ನಟಿ ಕಸ್ತೂರಿ ಶಂಕರ್ ವಿರುದ್ಧ ಚೆನೈನ ಎಗ್ಮೋರ್ ಪೊಲೀಸ್ ಠಾಣೆ ಸೇರಿ ಮಧುರೈನಲ್ಲಿಯೂ ದೂರು ದಾಖಲಿಸಲಾಗಿತ್ತು.