ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣದ ‘ನಾಗ್‌ಜಿಲ್ಲಾ’ (Naagzilla) ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ (Karthik Aaryan) ಕೈಜೋಡಿಸಿದ್ದಾರೆ. ಈ ಬಾರಿ ಹಾವಿನ ಅವತಾರದಲ್ಲಿ ಕಾರ್ತಿಕ್ ಬರುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಇದನ್ನೂ ಓದಿ:ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಬೇಕು: ಹಿರಿಯ ನಟಿ ಜರೀನಾ ವಹಾಬ್
ಮೊದಲ ಬಾರಿಗೆ ರೂಪವನ್ನು ಬದಲಿಸುವ ಹಾವಿನ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಅವರ ಪಾತ್ರದ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಸಿನಿಮಾಗೆ ‘ನಾಗ್‌ಜಿಲ್ಲಾ’ ಎಂದು ಭಿನ್ನವಾಗಿರೋ ಟೈಟಲ್ ಇಡಲಾಗಿದೆ. ಈ ಸಿನಿಮಾ ಮುಂದಿನ ವರ್ಷ ಆ.14ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ:ಆ್ಯನಿವರ್ಸರಿ ದಿನವೇ ಹೆಣ್ಣು ಮಗುವನ್ನು ಬರಮಾಡಿಕೊಂಡ ನಟ ವಿಷ್ಣು ವಿಶಾಲ್, ಜ್ವಾಲಾ ಗುಟ್ಟಾ ದಂಪತಿ
 
View this post on Instagram
 
ಸದಾ ಲವರ್ ಬಾಯ್ ಪಾತ್ರಗಳಲ್ಲಿ ನಟಿಸುತ್ತಿದ್ದ ಕಾರ್ತಿಕ್ ಈಗ ಹಾವಿನ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ. ಅವರಿಗೆ ಮೃಗದೀಪ್ ಸಿಂಗ್ ಲಂಬಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ಗೌತಮ್ ಮೆಹ್ರಾ ಚಿತ್ರಕಥೆ ಬರೆದಿದ್ದಾರೆ. ಸದ್ಯ ‘ನಾಗ್‌ಜಿಲ್ಲಾ’ ಚಿತ್ರದ ಪೋಸ್ಟರ್ ನೋಡಿ ಸಿನಿಮಾ ಬಗೆಗಿನ ನಿರೀಕ್ಷೆ ಫ್ಯಾನ್ಸ್‌ಗೆ ಹೆಚ್ಚಾಗಿದೆ.
ಅಂದಹಾಗೆ, ಶ್ರೀಲೀಲಾ ಜೊತೆ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ.
 
					


 
		 
		 
		 
		 
		 
		 
		 
		 
		