ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Karthik Aryan) ಮತ್ತು ಶ್ರೀಲೀಲಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾದ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಹೀಗಿರುವಾಗ ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದು ಕಾರ್ತಿಕ್ ಆರ್ಯನ್ ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ ಆರೋಪ – ದೇವ್ರು ಒಳ್ಳೆಯದು ಮಾಡ್ಲಿ ಎಂದ ಧನ್ವೀರ್!
- Advertisement -
ಕಾರ್ತಿಕ್ ಆರ್ಯನ್ ಹಾಗೂ ಕನ್ನಡದ ನಟಿ ಶ್ರೀಲೀಲಾ ಡೇಟಿಂಗ್ ನಿಜಕ್ಕೂ ಡೇಟಿಂಗ್ ಮಾಡ್ತಿದ್ದಾರಾ? ಎಂಬುದಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ ಕಾರ್ತಿಕ್ ಸದ್ಯ ಶೇರ್ ಮಾಡಿರೋ ಪೋಸ್ಟ್ ಭಾರೀ ವೈರಲ್ ಆಗ್ತಿದೆ. ಪ್ರಕೃತಿ ಮಧ್ಯೆ ಕುಳಿತು ಶ್ರೀಲೀಲಾರನ್ನು ಕಾರ್ತಿಕ್ ನೋಡ್ತಿರೋ ಫೋಟೋ ಶೇರ್ ಮಾಡಿ, ಅದಕ್ಕೆ ‘ನೀನೇ ನನ್ನ ಜೀವನ’ ಎಂದು ಅಡಿಬರಹ ನೀಡಿದ್ದಾರೆ. ಇಬ್ಬರೂ ‘ಆಶಿಕಿ 3’ ಚಿತ್ರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ನಟನೆಯ ಸಿನಿಮಾ ನಿಂತು ಹೋಗಿಲ್ಲ- ಸ್ಪಷ್ಟನೆ ನೀಡಿದ ನಿರ್ಮಾಪಕ
- Advertisement -
View this post on Instagram
- Advertisement -
‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಮಾ.25ರಂದೇ ಚಿತ್ರತಂಡದ ಜೊತೆ ಈ ಜೋಡಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದೆ. ಇಬ್ಬರೂ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶೂಟಿಂಗ್ ಫೋಟೋ ಆಗಿದ್ರೂ ಇದು ರಿಯಲ್ ಅನ್ನೋವಷ್ಟರ ಮಟ್ಟಿಗೆ ಇಬ್ಬರ ಕೆಮಿಸ್ಟ್ರಿ ಕಂಡು ಬರುತ್ತಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
- Advertisement -
ಇನ್ನೂ ಅನುರಾಗ್ ಬಸು ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ ಕುರಿತಾದ ಸಿನಿಮಾ ಇದಾಗಿದೆ. ಇದೇ ವರ್ಷ ದೀಪಾವಳಿ ಹಬ್ಬದಂದು ಸಿನಿಮಾ ತೆರೆ ಕಾಣಲಿದೆ.
ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್‌ನಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಕಾರ್ತಿಕ್ ಆರ್ಯನ್ ತಾಯಿ ಆಡಿದ ಮಾತು ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿತ್ತು.
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದರೂ, ಈ ಜೋಡಿ ಮಾತ್ರ ಇದುವರೆಗೂ ಏನು ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.