ಸದಾ ವಿವಾದಗಳ ಮೂಲಕವೇ ಫೇಮಸ್ ಆಗುತ್ತಿರುವ ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 2020ರಲ್ಲಿ ರಾಹುಲ್ ಕನ್ವಾಲ್ ಎನ್ನುವವರ ವಿರುದ್ಧ ದ್ವೆಷಪೂರ್ಣ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಕಮಾಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Advertisement
ಶಿವಸೇನಾ ಪಕ್ಷದ ಸದಸ್ಯರಾಗಿರುವ ರಾಹುಲ್ ಕನ್ವಾಲ್ ವಿರುದ್ಧ 2020ರಲ್ಲಿ ಕಮಾಲ್, ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದ್ದರಂತೆ. ಆಗ ರಾಹುಲ್, ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆಗ ಕಮಾಲ್ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಬಂಧನ ಸಾಧ್ಯವಾಗಿರಲಿಲ್ಲ. ಇದೀಗ ಕಮಾಲ್, ಮುಂಬೈ ಏರ್ ಪೋರ್ಟಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ
Advertisement
Advertisement
ಕನ್ನಡದ ಕೆಜಿಎಫ್ 2, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾವನ್ನು ಜಗತ್ತೇ ಹೊಗಳುತ್ತಿದ್ದಾಗ ಇವು ಕಳಪೆ ಸಿನಿಮಾಗಳು, ಇಂತಹ ಸಿನಿಮಾಗಳನ್ನು ಹೊಗಳುತ್ತಿರುವವರಿಗೆ ತಲೆ ಸರಿ ಇಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಕಮಾಲ್. ಅಲ್ಲದೇ, ತಮ್ಮ ಜೀವನದ ಅನೇಕ ಖಾಸಗಿ ಸಂಗತಿಗಳನ್ನು ಕಮಾಲ್ ಬರೆದುಕೊಂಡು ಸುದ್ದಿ ಆಗುತ್ತಿದ್ದರು. ಇದೀಗ ಬಂಧನವಾಗಿ ಸುದ್ದಿಯಾಗಿದ್ದಾರೆ.