‘ಸಲಾರ್’ ಬೆಡಗಿ ಶ್ರುತಿ ಹಾಸನ್ (Shruti Haasan) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಸಲಾರ್’ (Salaar) ಸಕ್ಸಸ್ ನಂತರ ಶ್ರುತಿ, ‘ವಿಕ್ರಮ್’ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ಸಾಥ್ ನೀಡಿದ್ದಾರೆ.

View this post on Instagram
ಇದೀಗ ಮಗಳು ಶ್ರುತಿ ನಟನೆಯ ಸಿನಿಮಾಗೆ ತಂದೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಶ್ರುತಿ ಮತ್ತು ಲೋಕೇಶ್ ಜೊತೆಯಿರುವ ಬ್ಲ್ಯಾಕ್ & ವೈಟ್ ಫೋಟೋ ಹಂಚಿಕೊಂಡು, ಇಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ.
ಈ ಮೂಲಕ ಅಪ್ಪ ಕಮಲ್ ಮತ್ತು ಮಗಳು ಶೃತಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಭಿನ್ನ ಕಥೆಯನ್ನು ತೆರೆಯ ಮೇಲೆ ತರಲು ಸಕಲ ತಯಾರಿ ನಡೆಯುತ್ತಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ಹೇಗಿರಲಿದೆ ಎಂದು ಕೌತುಕದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

