ಲೋಕಸಭೆ (Lok Sabha) ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವಾಗಲೇ ನಟ ಕಮಲ್ ಹಾಸನ್ , ಚುನಾವಣೆಯಲ್ಲಿ (Election) ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೂ ಆರಂಭಿಸಿದ್ದಾರಂತೆ.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಕೊಯಮತ್ತೂರು (Coimbatore) ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಡಿಮೆ ಅಂತರದ ಮತಗಳಿಂದ ಸೋಲು ಕಂಡಿದ್ದರು. ಈ ಕ್ಷೇತ್ರದ ನಾಡಿಮಿಡಿತ ಅರಿತವರು ಆಗಿದ್ದರಿಂದ ಇದೇ ಕ್ಷೇತ್ರದಲ್ಲೇ ಲೋಕಸಭಾ ಚುನಾವಣೆಯನ್ನು ಎದುರಿಸಲು ಅವರು ಸಜ್ಜಾಗಿದ್ದಾರಂತೆ.
ಒಂದು ಕಡೆ ಚುನಾವಣೆ ಸಿದ್ಧತೆ ಮತ್ತೊಂದು ಕಡೆ ಹೊಸ ಸಿನಿಮಾದ ಚಿತ್ರೀಕರಣ. ಹೀಗೆ ಬಿಡುವಿಲ್ಲದಂತೆ ಕಮಲ್ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಮ್ಮದೇ ಆದ ತಂಡವೊಂದನ್ನು ಮಾಡಿಕೊಂಡು, ಚುನಾವಣಾ ಪೂರ್ವ ತಯಾರಿಯನ್ನೂ ಅವರು ಆರಂಭಿಸಿದ್ದಾರಂತೆ. ಹಲವು ಬಾರಿ ಈ ಕ್ಷೇತ್ರಕ್ಕೂ ಅವರು ಹೋಗಿ ಬಂದಿದ್ದಾರೆ ಎನ್ನುತ್ತಾರೆ ಕಮಲ್ ಆಪ್ತರು.
Web Stories