‘ಇಂಡಿಯನ್ 2’ ನಿರ್ದೇಶಕನಿಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

Public TV
2 Min Read
kamal haasan

ಮಿಳು ನಟ ಕಮಲ್ ಹಾಸನ್ (Kamal Haasan) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿಗೆ ಮಹಿಳಾ ಬಸ್ ಡ್ರೈವರ್ ಕಾರ್ ಗಿಫ್ಟ್ ಕೊಡುವ ಮೂಲಕ ಅಭಿಮಾನಿಗಳ ಪ್ರಶಂಸೆಗೆ ನಟ ಪಾತ್ರರಾಗಿದ್ದರು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂಬ ಕಾರಣದಿಂದ ಮಹಿಳಾ ಬಸ್ ಡ್ರೈವರ್ ಕಾರು ಗಿಫ್ಟ್ ಮಾಡಿದ್ರು. ಈಗ ಮತ್ತೆ ಗಿಫ್ಟ್ ವಿಚಾರವಾಗಿ ನಟ ಕಮಲ್ ಹಾಸನ್ ಸುದ್ದಿಯಲ್ಲಿದ್ದಾರೆ. ನಿರ್ದೇಶಕ ಶಂಕರ್‌ಗೆ(Director Shankar) ದುಬಾರಿ ವಾಚ್‌ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ:ಆಸ್ಕರ್ ಜ್ಯೂರಿಯಾಗುವ ಅವಕಾಶ ಪಡೆದ ರಾಮ್‌ಚರಣ್- ಜ್ಯೂ.ಎನ್‌ಟಿಆರ್

kamal haasan vikram film 1

‘ವಿಕ್ರಮ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಕಮಲ್ ಹಾಸನ್ ಅವರು ಶಂಕರ್ ನಿರ್ದೇಶನದ ‘ಇಂಡಿಯನ್ 2’ (Indian 2) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಮ್ ಚಿತ್ರದಂತೆಯೇ ಇಂಡಿಯನ್ 2 ಕೂಡ ಸೂಪರ್ ಸಕ್ಸಸ್ ಕಾಣಬೇಕು ಅಂತಾ ಕಮಲ್ ಹಾಸನ್ ಕೆಲಸದಲ್ಲಿ ನಿರತರಾಗಿದ್ದಾರೆ.

ಶಂಕರ್ ಸಾರಥ್ಯದ ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿವೆ. ಅನೇಕ ಅಡೆತಡೆಗಳ ಬಳಿಕ ಇಂಡಿಯಾ-2 ಮುಕ್ತಾಯ ಹಂತ ತಲುಪಿದೆ. ಸದ್ಯ ಯಶಸ್ವಿಯಾಗಿ ಚಿತ್ರೀಕರಣ ಮುಗಿಯುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಕಮಲ್ ಈ ಉಡುಗೊರೆ ಕೊಡಲು ಕಾರಣ ಇಂಡಿಯನ್ -2 ಸಿನಿಮಾ. ಚಿತ್ರದ ಕೆಲವು ದೃಶ್ಯಗಳನ್ನು ಇಂಪ್ರೆಸ್ ಆದ ಕಮಲ್ ಈ ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಬರೆದುಕೊಂಡಿದ್ದಾರೆ.

ಶಂಕರ್ ಕೈಗೆ ಸ್ವತಃ ಕಮಲ್ ಹಾಸನ್ ವಾಚ್ ಕಟ್ಟುವ ಫೋಟೋವನ್ನು ಶೇರ್ ಮಾಡಿ ಬಹಿರಂಗಪಡಿಸಿದ್ದಾರೆ. ನಾನು ಇಂದು ಇಂಡಿಯನ್ 2 ಚಿತ್ರದ ಪ್ರಮುಖ ದೃಶ್ಯಗಳನ್ನು ನೋಡಿದೆ. ಶಂಕರ್‌ಗೆ ನನ್ನ ಶುಭಾಶಯಗಳು. ಇದು ನಿಮ್ಮ ದೊಡ್ಡ ಸಿನಿಮಾ ಆಗಬಹುದು ಎಂಬುದು ನನ್ನ ಸಲಹೆ. ಏಕೆಂದರೆ ಇದು ನಿಮ್ಮ ಕಲಾ ಜೀವನದ ಅತ್ಯುನ್ನತ ಹಂತವಾಗಿದೆ. ಹೆಮ್ಮೆಯಿಂದಿರಿ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ.

Share This Article