ಲೋಕಸಭೆ (Lok Sabha) ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದ್ದರೂ, ತಮಿಳು ನಾಡಿನ ನಾನಾ ಪಕ್ಷಗಳು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿವೆ. ಅಭ್ಯರ್ಥಿಗಳು, ಕ್ಷೇತ್ರ, ಹಿನ್ನೆಲೆಯಾಗಿ ಪ್ರಚಾರ ಹೀಗೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಅಂತೆಯೇ ಈ ಬಾರಿ ಹೆಸರಾಂತ ನಟ ಕಮಲ್ ಹಾಸನ್ ಕೂಡ ಚುನಾವಣೆ ಕಣದಲ್ಲಿ ಇರಲಿದ್ದಾರೆ ಎಂದು ಹೇಳಾಗುತ್ತಿದೆ.
Advertisement
ಚುನಾವಣೆ (Election) ಕಣಕ್ಕೆ ಇಳಿಯುವುದು ಕಮಲ್ (Kamal Haasan)ಗೆ ಹೊಸದಲ್ಲ. ಈಗಾಗಲೇ ಒಂದು ಬಾರಿ ಚುನಾವಣೆಯನ್ನು ಎದುರಿಸಿ ಸೋತಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಕೊಯಮತ್ತೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಆ ಕ್ಷೇತ್ರದಲ್ಲಿ ಒಂದಷ್ಟು ಕೆಲಸವನ್ನೂ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್
Advertisement
Advertisement
ಕಮಲ್ ಹಾಸನ್ ತಮ್ಮದೇ ಎಂ.ಎನ್.ಎಂ (M.N.M) ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಪಕ್ಷದ ರಾಜ್ಯಮಟ್ಟದ ಪ್ರಚಾರದ ಅಭಿಯಾನವನ್ನು ನಿನ್ನೆಯಿಂದ ಕೊಯಮತ್ತೂರು (Coimbatore) ದಕ್ಷಿಣ ಕ್ಷೇತ್ರದಿಂದ ಆರಂಭಿಸಿದ್ದಾರೆ. ವಿಧಾನಸಭೆಯ ಒಟ್ಟು 234 ಕ್ಷೇತ್ರಗಳಲ್ಲೂ ಪ್ರಚಾರ ಮತ್ತು ಕಾರ್ಯಕರ್ತರ ಕುಂದುಕೊರತೆಗಳನ್ನು ಈ ಅಭಿಯಾನ ಪಟ್ಟಿ ಮಾಡಲಿದೆ.
Advertisement
ಕೊಯಮತ್ತೂರು ಕ್ಷೇತ್ರದಿಂದಲೇ ಕಮಲ್ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮನವಿಯಾಗಿದೆಯಂತೆ. ಹೀಗಾಗಿ ಕಮಲ್ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Web Stories