ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ನಟ, ನಟಿಯರು ಒಬ್ಬೊಬ್ಬರೇ ದರ್ಶನ್ ಪ್ರಕರಣ ವಿಚಾರವಾಗಿ ಮಾತನಾಡುತ್ತಿದ್ದಾರೆ. ಈಗ ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತೆ ಎಂದು ದರ್ಶನ್ ಪ್ರಕರಣಕ್ಕೆ ಜುಗಾರಿ ಅವಿನಾಶ್ (Jugari Avinash) ರಿಯಾಕ್ಟ್ ಮಾಡಿದ್ದಾರೆ.
ಹಾಸ್ಯನಟ ನರಸಿಂಹರಾಜು ಮೊಮ್ಮಗ ಜುಗಾರಿ ಅವಿನಾಶ್ ಮಾತನಾಡಿ, ಇದು ಅವರ ವೈಯಕ್ತಿಕ ಆಗುತ್ತೆ. ನಮ್ಮೆಲ್ಲರಿಗಿಂತ ಹೆಚ್ಚಾಗಿ ಕಾನೂನು ಇದೆಯಲ್ಲ. ಅದೇ ನೋಡಿಕೊಳ್ಳುತ್ತೆ. ಯಾರ್ ಕಡೆ ನಿಜ ಇರುತ್ತೋ ಅದೇ ಸತ್ಯ ಅಲ್ವಾ ಎಂದು ನಟ ಜುಗಾರಿ ಅವಿನಾಶ್ ಹೇಳಿದ್ದಾರೆ. ಇದನ್ನೂ ಓದಿ:ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್
ಅಂದಹಾಗೆ, ಜುಗಾರಿ, ಕಳವು ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ. ಇದೀಗ ‘ನನ್ನ ದೇವ್ರು’ (Nanna Devaru) ಸೀರಿಯಲ್ ಮೂಲಕ ನಾಯಕ ನಟನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅವಿನಾಶ್‌ಗೆ ನಟಿ ಮಯೂರಿ ನಾಯಕಿಯಾಗಿದ್ದಾರೆ.