‘ದೇವರ’ ಸಿನಿಮಾ (Devara) ಬಳಿಕ ಜ್ಯೂ.ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೇ 20ರಂದು ತಾರಕ್ ಹುಟ್ಟುಹಬ್ಬದ ಹಿನ್ನೆಲೆ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗುತ್ತಾ ಎಂದು ನಿರೀಕ್ಷಿಸಿದವರಿಗೆ ಕಹಿ ಸುದ್ದಿ ಸಿಕ್ಕಿದೆ. ನಟನ ಹುಟ್ಟುಹಬ್ಬದಂದು ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲ್ಲ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

View this post on Instagram
ಸದ್ಯ ಈ ಸುದ್ದಿ ಫ್ಯಾನ್ಸ್‌ಗೆ ಬೇಸರ ಆಗಿದ್ರೂ ‘ವಾರ್ 2’ ಚಿತ್ರದ ತುಣುಕನ್ನು ನೋಡಿ ಸಂಭ್ರಮಿಸಬಹುದಲ್ವಾ ಎಂದು ಖುಷಿಪಡ್ತಿದ್ದಾರೆ. ನಟನ ಮೊದಲ ಬಾಲಿವುಡ್ ಚಿತ್ರವಾಗಿರೋದ್ರಿಂದ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.


