ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಜಯರಾಂ ಕಾರ್ತಿಕ್ ಸಿನಿಮಾಗಿಂತ ತಮ್ಮ ಮದುವೆ ವಿಚಾರಕ್ಕೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಫ್ಯಾಶನ್ ಡಿಸೈನರ್ ಅಪರ್ಣ ಸಮಂತಾ ಜತೆಗೆ ಜೆಕೆ ಮದುವೆ ಎಂದೆಲ್ಲಾ ಸುದ್ದಿಯಾಗಿತ್ತು. ಇದೀಗ ಈ ಎಲ್ಲಾ ವದಂತಿಗೂ ಜೆಕೆ ಸ್ಪಷ್ಟನೆ ನೀಡಿದ್ದಾರೆ.
Advertisement
ಜಯರಾಂ ಕಾರ್ತಿಕ್ ಹಿಂದಿ ಕಿರುತೆರೆ ಮರಳಲು ಸಜ್ಜಾಗಿದ್ದಾರೆ. ಜತೆಗೆ ಸಾಕಷ್ಟು ಸಿನಿಮಾಗಳು ಜೆಕೆ ಕೈಯಲ್ಲಿದೆ. ಈಗ ಅವರ ಮದುವೆ ವದಂತಿಯ ಬಗ್ಗೆ ನಟ ಬೇಸರಿಸಿಕೊಂಡಿದ್ದಾರೆ. ಫ್ಯಾಶನ್ ಡಿಸೈನರ್ ಅಪರ್ಣ ಜತೆಗಿರೋ ಫೋಟೋ ಹಂಚಿಕೊಂಡ ಬೆನ್ನಲ್ಲೇ ಜೆಕೆ ಮದುವೆಯ ಸುದ್ದಿ ಕೂಡ ಸೃಷ್ಟಿಯಾಗಿತ್ತು. ಈಗ ಈ ಸುದ್ದಿ ಕುರಿತು ಜಯರಾಂ ಕಾರ್ತಿಕ್ ಮಾತನಾಡಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ‘ಧಾಕಡ್’ ಸಿನಿಮಾ ಸೋಲಿಗೆ ಕಾಣದ ಕೈಗಳು ಕಾರಣವಾ? : ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ
Advertisement
Advertisement
ಈ ಸುದ್ದಿ ಸುಳ್ಳು, ನನಗೆ ಅದೆಷ್ಟು ಬಾರಿ ಮದುವೆ ಮಾಡಿಸುತ್ತಿರೋ ಗೊತ್ತಿಲ್ಲ. ಅಪರ್ಣ ಮತ್ತು ನಾನು ಒಳ್ಳೆಯ ಸ್ನೇಹಿತರಷ್ಟೇ, ನಮ್ಮ ಸಿನಿಮಾಗಿಂತ ನಮ್ಮ ವಯಕ್ತಿಕ ವಿಚಾರ ಬಗ್ಗೆನೇ ಸುದ್ದಿಯಾಗುತ್ತಿದೆ ನಮ್ಮಿಬ್ಬರ ನಡುವೆ ಮದುವೆಯ ವಿಚಾರ ಚರ್ಚೆಯಾಗಿಲ್ಲ ಎಂದು ಮದುವೆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಹಿಂದಿ ಕಿರುತೆರೆಯಲ್ಲಿ ಮಿಂಚಲು ಜಯರಾಂ ಕಾರ್ತಿಕ್ ಸಜ್ಜಾಗಿದ್ದಾರೆ.