ತಮಿಳಿನ ಸ್ಟಾರ್ ನಟ ಜಯಂ ರವಿ (Jayam Ravi) ಸೆ.9ರಂದು ಆರತಿ ಜೊತೆಗಿನ ದಾಂಪತ್ಯ ಅಂತ್ಯವಾಗಿರೋದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ, ನಟನ ನಡೆಗೆ ಆರತಿ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗಮನಕ್ಕೆ ತರದೇ ಡಿವೋರ್ಸ್ (Divorce) ಘೋಷಿಸಿದ್ದಾರೆ. ಏಕಪಕ್ಷೀಯ ನಿರ್ಧಾರ, ಇದರ ಬಗ್ಗೆ ನನಗೇನು ಹೇಳಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆರತಿ (Aarti) ಆರೋಪಿಸಿದ್ದಾರೆ.
Advertisement
ಡಿವೋರ್ಸ್ ಕುರಿತು ಸುದೀರ್ಘವಾಗಿ ಆರತಿ ಪತ್ರ ಬರೆದಿದ್ದಾರೆ. ಅದರಲ್ಲಿ, ಇತ್ತೀಚೆಗೆ ನಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಘೋಷಣೆಯಿಂದ ನನಗೆ ಶಾಕ್ ಆಗಿದೆ. ಯಾಕೆಂದರೆ ನನಗೆ ಗಮನಕ್ಕೆ ತರದೆ, ನನ್ನ ಅನುಮತಿಯನ್ನು ಪಡೆಯದೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 18 ವರ್ಷಗಳ ಕಾಲ ದಾಂಪತ್ಯದ ಇತಿಹಾಸವಿರುವ ವಿಷಯವನ್ನು ಗೌರವಯುತವಾಗಿ, ಖಾಸಗಿಯಾಗಿ ಹ್ಯಾಂಡಲ್ ಮಾಡಬಹುದಿತ್ತು ಎಂದಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ
Advertisement
View this post on Instagram
Advertisement
ಕಳೆದ ಕೆಲವು ದಿನಗಳಿಂದ ನನ್ನ ಪತಿಯೊಡನೆ ಮಾತನಾಡುವುದಕ್ಕೆ ಪ್ರಯತ್ನಪಡುತ್ತಲೇ ಇದ್ದೇನೆ. ನಾವು ನಮ್ಮ ಕುಟುಂಬಕ್ಕಾಗಿ ಮಾಡಿಕೊಂಡಿರುವ ಕಮಿಟ್ಮೆಂಟ್ಗಳ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಪ್ರಯತ್ನಿಸಿದೆ. ಆದರೆ, ಆ ಅವಕಾಶವನ್ನು ಅವರು ನನಗೆ ಕೊಡಲೇ ಇಲ್ಲ. ನನ್ನ ಹಾಗೂ ನನ್ನ ಮಕ್ಕಳನ್ನು ಕತ್ತಲೆಯಲ್ಲಿಟ್ಟು ಈ ಘೋಷಣೆಯನ್ನು ಮಾಡಲಾಗಿದೆ. ಈ ದಾಂಪತ್ಯದಿಂದ ಹೊರಬರುವುದು ಸಂಪೂರ್ಣ ಏಕಪಕ್ಷೀಯ ನಿರ್ಧಾರವಾಗಿದ್ದು, ಇದು ನಮ್ಮ ಕುಟುಂಬಕ್ಕೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ ಎಂದು ಜಯಂ ರವಿ ವಿರುದ್ಧ ಆರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಒಬ್ಬ ತಾಯಿಯಾಗಿ ತನ್ನ ಇಬ್ಬರು ಮಕ್ಕಳು ಮೊದಲ ಆದ್ಯತೆಯಾಗಿದ್ದು, ಅವರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲದೆ ತನ್ನ ಮೇಲೆ ಸಾರ್ವಜನಿಕವಾಗಿ ತಪ್ಪನ್ನು ಹೊರಿಸಲಾಗುತ್ತಿದೆ. ನನ್ನ ಕ್ಯಾರೆಕ್ಟರ್ ಮೇಲೆ ಅಟ್ಯಾಕ್ ಮಾಡಲಾಗುತ್ತಿದೆ. ತಮ್ಮ ಕುಟುಂಬದ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡಿ, ಅನಗತ್ಯ ವದಂತಿಗಳನ್ನು ಹಬ್ಬಿಸದಿರುವಂತೆ ಆರತಿ ಮನವಿ ಕೂಡ ಮಾಡಿಕೊಂಡಿದ್ದಾರೆ. ಈಗ ಆರತಿ ಪರವಾಗಿ ಅವರ ಆಪ್ತರು, ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ.
ಅಂದಹಾಗೆ, ಜಯಂ ರವಿ ಅವರು ಆರತಿ ಜೊತೆ 2009ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರೂ ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.