ತಮಿಳು ನಟ ಜಯಂ ರವಿ (Jayam Ravi) ಇತ್ತೀಚೆಗೆ ಆರತಿ (Aarati) ಜೊತೆಗಿನ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ಬೆನ್ನಲ್ಲೇ ಅವರ ಡಿವೋರ್ಸ್‌ಗೆ ಕಾರಣವೇನು ಎಂಬುದರ ಬಗ್ಗೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಗಾಯಕಿ ಕೆನಿಷಾ (Kenishaa Francis) ಜೊತೆ ಜಯಂ ರವಿ ಸಂಬಂಧದಲ್ಲಿದ್ದಾರೆ ಎಂದು ಗುಸು ಗುಸು ಶುರುವಾಗಿತ್ತು. ಇದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಡಿವೋರ್ಸ್ ವಿಚಾರದಲ್ಲಿ ಕೆನಿಷಾರನ್ನು ಎಳೆಯಬೇಡಿ ಎಂದು ಜಯಂ ರವಿ ಗರಂ ಆಗಿದ್ದಾರೆ.
ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಜಯಂ ರವಿ ಅವರು ಕೆನಿಷಾ ಜೊತೆಗಿನ ರಿಲೇಷನ್‌ಶಿಪ್ ಕುರಿತು ಪ್ರತಿಕ್ರಿಯಿಸಿ, ಬದುಕಿ ಮತ್ತು ಬದಕಲು ಬಿಡಿ. ನನ್ನ ಡಿವೋರ್ಸ್ ವಿಚಾರದಲ್ಲಿ ಅವರನ್ನು ಎಳೆಯಬೇಡಿ. ವೈಯಕ್ತಿಕ ಬದುಕು ವೈಯಕ್ತಿಕವಾಗಿಯೇ ಇರಲಿ, ಕೆನಿಷಾ ವೃತ್ತಿರಂಗದಲ್ಲಿ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರು 600ಕ್ಕೂ ಹೆಚ್ಚು ಸ್ಟೇಜ್ ಶೋ ನೀಡಿದ್ದಾರೆ ಎಂದರು. ಇದನ್ನೂ ಓದಿ:ಹರ್ಷಿಕಾ ಬೇಬಿ ಶವರ್ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್
ಕೆನಿಷಾ ಮನೋವೈದ್ಯೆ ಕೂಡ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಹೀಲಿಂಗ್ ಸೆಂಟರ್ ಆರಂಭಿಸುವ ಯೋಜನೆಯಿದೆ ಎಂದು ಹೇಳಿದ್ದಾರೆ. ಅದನ್ನು ತಡೆಯಲು ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು. ಆದರೆ ಹಾಗೆ ಮಾಡುವುದು ತಪ್ಪು. ಇದಕ್ಕೆ ಕಾನೂನು ಹೋರಾಟದ ಮೂಲಕ ಸೂಕ್ತ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ಜಯಂ ರವಿ ಮಾತನಾಡಿದರು.
ಆರತಿಗೆ ಡಿವೋರ್ಸ್ ವಿಚಾರ ಗೊತ್ತಿರಲಿಲ್ಲ ಎಂಬುದಕ್ಕೆ ಲಾಜಿಕ್ ಇಲ್ಲ, ನಾನು ಈಗಾಗಲೇ 2 ಬಾರಿ ಅವರಿಗೆ ನೋಟಿಸ್ ಕಳುಹಿಸಿದ್ದೇನೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇಲ್ಲಾ ಆದ್ಮೇಲೆ ನನಗೆ ಗೊತ್ತಿಲ್ಲ ಎಂದು ಹೇಳಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಮಕ್ಕಳಿಗಾಗಿ ಶಾಂತವಾಗಿದ್ದೇನೆ. ಕಾನೂನುಬದ್ಧವಾಗಿ ಹೋಗುತ್ತೇನೆ ಎಂದು ನಟ ಮಾತನಾಡಿದ್ದಾರೆ.