ತಮಿಳು ನಟ ಜಯಂ ರವಿ ಬಾಳಲ್ಲಿ ಡಿವೋರ್ಸ್ ಬಿರುಗಾಳಿ?

Public TV
1 Min Read
jayam ravi 1

ಕಾಲಿವುಡ್ ನಟ ಜಯಂ ರವಿ (Jayam Ravi) ಸದಾ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದರು. ಈಗ ವೈಯಕ್ತಿಕ ಬದುಕಿನ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಜಯಂ ರವಿ ದಾಂಪತ್ಯ (Wedding) ಬದುಕಿನಲ್ಲಿ ಬಿರುಕಾಗಿದೆ. ಇಬ್ಬರೂ ಡಿವೋರ್ಸ್‌ಗೆ (Divorce) ಮುಂದಾಗಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

jayam ravi

ಚಿತ್ರರಂಗದಲ್ಲಿ ಈಗ ಡಿವೋರ್ಸ್ ಬಿರುಗಾಳಿ ಜೋರಾಗಿದೆ. ನಾಗಚೈತನ್ಯ ಮತ್ತು ಸಮಂತಾ, ಐಶ್ವರ್ಯಾ ಮತ್ತು ಧನುಷ್ ಡಿವೋರ್ಸ್ ಪಡೆದ ಬೆನ್ನಲ್ಲೇ ಈಗ ಆರತಿ (Aarathi) ಮತ್ತು ಜಯಂ ರವಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ:ಮಿಡಲ್ ಕ್ಲಾಸ್ ಮನೆಯ ‘ಮರ್ಯಾದೆ ಪ್ರಶ್ನೆ’ ಎಂದ ರಾಕೇಶ್ ಅಡಿಗ, ಶೈನ್ ಶೆಟ್ಟಿ

jayam ravi

ಇತ್ತೀಚೆಗೆ ಆರತಿ ಪತಿ ಜೊತೆಗಿನ ತನ್ನ ಎಲ್ಲಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ತನ್ನ ಹೆಸರಿನ ಜೊತೆಯಿದ್ದ ಪತಿಯ ಹೆಸರು ಜಯಂ ರವಿ ಎಂಬುದನ್ನು ಕೂಡ ತೆಗೆದು ಹಾಕಿದ್ದಾರೆ. ಈ ನಡೆ ಡಿವೋರ್ಸ್ ಸುದ್ದಿಗೆ ಪುಷ್ಠಿ ನೀಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರಾ ಎಂದು ಕಾಯಬೇಕಿದೆ.

ಅಂದಹಾಗೆ, ತಮಿಳು ಕಿರುತೆರೆಯ ಪ್ರಖ್ಯಾತ ನಿರ್ಮಾಪಕರಾದ ಸುಜಾತಾ ವಿಜಯ್ ಕುಮಾರ್ ಅವರ ಪುತ್ರಿ ಆರತಿ. ಪರಸ್ಪರ ಪ್ರೀತಿಸಿ ಜಯಂ ರವಿ ಹಾಗೂ ಆರತಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Share This Article