ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಜಯರಾಮೇಗೌಡ ಅನ್ನುವವರಿಗೆ ನಟ ಜೈಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮತ್ತು ಹಲ್ಲೆ ಮಾಡಿದ್ದಾರೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ಜೂ.5ರಂದು ಈ ಘಟನೆ ನಡೆದದ್ದು, ಜಯರಾಮೇಗೌಡ ಅವರು ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಬಸ್ ನ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಜೈಜಗದೀಶ್ ಅವರು ಕಾರು ನಿಲ್ಲಿಸಿ, ಬಸ್ ನಿಂದ ಬಾಟಲಿ ಎಸೆಯುತ್ತೀಯಾ ಎಂದು ಕೆಟ್ಟದಾಗಿ ನಿಂದಿಸಿದರು. ಮಾತಿಗೆ ಮಾತು ಬೆಳೆದ ನಂತರ ಅವರು ನನ್ನ ಮೇಲೆ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್
ಈ ಕುರಿತು ಜೈಜಗದೀಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ವರದಿಯಾಗಿದೆ. ಜೈಜಗದೀಶ್ ಮತ್ತು ಜಯರಾಮೇಗೌಡ ಅವರು ಜಗಳ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಜೈಜಗದೀಶ್ ಅವರಿಗೆ ಸಮಾಧಾನ ಮಾಡಿದರೂ, ಅವರು ಕೋಪ ಕಡಿಮೆ ಆಗಲಿಲ್ಲ ಎಂದಿದ್ದಾರೆ ಜಯರಾಮೇಗೌಡ.