ಸ್ಯಾಂಡಲ್‌ವುಡ್‌ನಲ್ಲಿ ‘ಯಾನ’ (Yaana) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜೈ ಜಗದೀಶ್ ಪುತ್ರಿ ವೈಭವಿ ಜಗದೀಶ್ (Vaibhavi Jagadeesh) ಅವರು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಅವರು ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದವರು. ಸ್ಯಾಂಡಲ್‌ವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ವೈಭವಿ, ವೈಸಿರಿ, ವೈನಿಧಿ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೂವರು ಕೂಡ ಒಂದಲ್ಲಾ ಒಂದು ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.
ವೈಭವಿ ಜಗದೀಶ್ ಅವರು ‘ಯಾನ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದರು. ಸದ್ಯ ಚಿತ್ರರಂಗದಿಂದ ದೂರಯುಳಿದಿರುವ ವೈಭವಿ, ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು
ಕಪ್ಪು ಮತ್ತು ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ವೈಭವಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸ್ವಿಮಿಂಗ್ ಪೂಲ್‌ನಲ್ಲಿ ಕಪ್ಪು ಶಾರ್ಟ್ ಟಾಪ್ ಮತ್ತು ನೀಲಿ ಶಾಟ್ಸ್ ಧರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಪಿಂಕ್ ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಈ ಮೂಲಕ ಪಡ್ಡೆಹುಡುಗರ ಕಣ್ಣಿಗೆ ವೈಭವಿ ದರ್ಶನ ನೀಡಿದ್ದಾರೆ. ವೈಭವಿ ಹಾಟ್ ಲುಕ್‌ಗೆ ಬಾಯ್ಸ್ ಬೋಲ್ಡ್ ಆಗಿದ್ದಾರೆ.