ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ಧ್ವನಿಯಿಂದಲೇ ಚಿತ್ರ ಆರಂಭ-ಅಂತ್ಯ ಮತ್ತು ಚಿತ್ರದಲ್ಲಿರುವ ಮೂವರು ನಾಯಕರ ಪರಿಚಯವೂ ಆಗುತ್ತದೆ. ಹ್ಯಾಂಗೋವರ್ ಅಂದ್ರೆ ಏನು? ಎಂಬುದನ್ನು ಜಗ್ಗೇಶ್ ಅವರ ಧ್ವನಿಯ ಮುಖಾಂತರ ಚಿತ್ರ ನಿರ್ದೇಶಕ ವಿಠಲ್ ಭಟ್ ಹೇಳಲು ಹೊರಟಿದ್ದಾರೆ.
ಹೊಸಬರು ಚಿತ್ರರಂಗಕ್ಕೆ ಬರಬೇಕು, ಹೊಸಾ ತಂಡ ಉಳೀಬೇಕು-ಬೆಳೀಬೇಕು ಮತ್ತು ಕನ್ನಡ ಚಿತ್ರರಂಗ ಉನ್ನತ ಶಿಖರಕ್ಕೇರಬೇಕು ಎಂಬ ಚಿತ್ರರಂಗದ ಮೇಲಿನ ಪ್ರೀತಿಯಿಂದಲೇ ಜಗ್ಗೇಶ್ ಅವರು ಸಾಕಷ್ಟು ಹೊಸಬರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಜಗ್ಗೇಶ್ ಅಣ್ಣ ಪ್ರೀತಿಯಿಂದ ತಮ್ಮ ಧ್ವನಿಯನ್ನು ನೀಡುವುದರಿಂದ ಹ್ಯಾಂಗೋವರ್ ತಂಡಕ್ಕೆ ಮತ್ತಷ್ಟು ಭರವಸೆ ಹುಟ್ಟಿದೆ.
ರಮಣಿ ರೀಲ್ಸ್ ಸಂಸ್ಥೆಯ ಚೊಚ್ಚಲ ಕೂಸು ‘ಹ್ಯಾಂಗೋವರ್’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಸಿದ್ಧತೆಗಳನ್ನು ನಡೆಸುತ್ತಿದೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ ಇರುವ ಹ್ಯಾಂಗೋವರ್ ಗೆ ಯೋಗಿ ಕ್ಯಾಮರಾ ಹಿಡಿದಿದ್ದು ರಾಕೇಶ್.ಡಿ ಹಣವನ್ನು ಹೊಂದಿಸಿದ್ದಾರೆ. ಕಿರಣ್ ಕತ್ತರಿಯಲ್ಲಿ ಚಿತ್ರ ಫೈನ್ ಟ್ಯೂನ್ ಆಗುತ್ತಿದೆ. ಏಪ್ರಿಲ್ ಕೊನೆಯ ವಾರ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಹ್ಯಾಂಗೋವರ್ ತಂಡ.