ಬೆಂಗಳೂರು: ನವರಸ ನಾಯಕ ಜಗ್ಗೇಶ್ ವರನಟ ನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ಗುರು ಜಗ್ಗೇಶ್ ಅವರ ಮದುವೆ ಮಾಡಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದರು. ಹೀಗಾಗಿ ಆ ದಿನವೇ ಮಗನ ಮದುವೆ ಮಾಡಿಸಿದ್ದು, ಯಾಕೆ ಎನ್ನುವುದನ್ನು ಹಂಚಿಕೊಂಡಿದ್ದಾರೆ.
ಕಳೆದ ದಿನ ರಾ.ರಾಜ್‍ಕುಮಾರ್ ಅವರ 90ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ. ನಟ ಜಗ್ಗೇಶ್ ಅವರಿಗೆ ಅಣ್ಣಾವ್ರು ಎಂದರೆ ತುಂಬಾ ಅಭಿಮಾನ. ಹೀಗಾಗಿ ಅವರ ಹುಟ್ಟಹಬ್ಬದ ಪ್ರಯುಕ್ತ ಕುಟುಂಬರೆಲ್ಲರೂ ಒಟ್ಟಾಗಿ ಸೇರಿ ಆಚರಿಸಿದ್ದಾರೆ. ಇದೇ ವೇಳೆ ತಮ್ಮ ಮಗ ಗುರು ಅವರ ಮದುವೆಯನ್ನು ರಾಜ್‍ಕುಮಾರ್ ಅವರ ಜನ್ಮದಿನವೇ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.
“ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು, ನನ್ನ ಹಿರಿಯ ಮಗ ಗುರು ಜಗ್ಗೇಶ್‍ಗೆ 2014ರ ಏಪ್ರಿಲ್ 24 ರಂದು ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ. ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ” ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಜೊತೆ ತಮ್ಮ ಮಗನ ಮದುವೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
https://www.instagram.com/p/Bwn7ctqjeVO/