ಬೆಂಗಳೂರು: ನವರಸನಾಯಕ ಜಗ್ಗೇಶ್ ಇಂದು ತಮ್ಮ ಪತ್ನಿ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಫೋಟೋವೊಂದನ್ನು ತೆಗೆದು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಹೆಣ್ಮಕ್ಳೆ ಸ್ಟ್ರಾಂಗ್ ಗುರು ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ತಮ್ಮ ಪತ್ನಿ ಜೊತೆ ಕಾರಿನಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಡುಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ಜಗ್ಗೇಶ್ ಪತ್ನಿ ಪರಿಮಳ ಕಾರ್ ಡ್ರೈವ್ ಮಾಡುತ್ತಿದ್ದು, ನಟ ಜಗ್ಗೇಶ್ ಪಕ್ಕದಲ್ಲಿ ಕುಳಿತುಕೊಂಡಿದ್ದರು.
ಜಗ್ಗೇಶ್ ಇಂದು ತಮ್ಮ ಪತ್ನಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಒಂದು ಸೆಲ್ಫಿ ಕ್ಲಿಕ್ಕಿಸಿ ಫೋಟೋ ಅಪ್ಲೋಡ್ ಮಾಡಿ “ಮೇಡಂ ಡ್ರೈವಿಂಗ್ ಹಸ್ಬೆಂಡ್ ಕೈಕಟ್ಟಿ ಕೂತಿಂಗ್. ಹೆಣ್ಮಕ್ಳೆ ಸ್ಟ್ರಾಂಗ್ ಗುರು. ನನ್ನ ಅಡುಗೆ ಶೋಗೆ ರುಬ್ಬೋಕೆ ಕರ್ಕೊಂಡ್ ಹೋಗ್ತಾ ಇದ್ದಾರೆ. ಹೆಂಡ್ರು ಆಡರ್ ಗೆ ಮರುಮಾತಿಲ್ಲದೆ ಹಸು ಹಿಂದೆ ಎತ್ತು. ಹ್ಹಾ ಹ್ಹಾ ಎಂದು ಟ್ವೀಟ್ ಮಾಡಿದ್ದಾರೆ.
ಮೇಡಂಮ್ ಡ್ರೈವಿಂಗ್ ಹಸ್ಬೆಂಡ್ ಕೈಕಟ್ಟಿ ಕೂತಿಂಗ್..ಹೆಣ್ಮಕ್ಳೆ ಸ್ಟಾಂಗ್ ಗುರು..ನನ್ನ ಅಡುಗೆ ಶೋ #ztv #oggaranedabi ಗೆ ರುಬ್ಬೋಕೆ ಕರ್ಕೊಂಡ್ ಹೋಗ್ತಾ ಇದ್ದಾರೆ..ಹೆಂಡ್ರು orderಗೆ ಮರುಮಾತಿಲ್ಲದೆ ಹಸು ಹಿಂದೆ ಎತ್ತು..haha pic.twitter.com/jLMQJXWteS
— ನವರಸನಾಯಕ ಜಗ್ಗೇಶ್ (@Jaggesh2) March 28, 2018
ಜಗ್ಗೇಶ್ ಅವರು ಈ ಟ್ವೀಟ್ ಮಾಡಿ 2 ಗಂಟೆಯಲ್ಲೇ 53 ರಿಪ್ಲೇ, 27 ರೀಟ್ವೀಟ್ ಹಾಗೂ 693 ಲೈಕ್ಸ್ ಗಳು ಬಂದಿವೆ.
ಇತ್ತೀಚಿಗೆ ಜಗ್ಗೇಶ್ ಅವರು ತಮ್ಮ 55 ಹುಟ್ಟುಹಬ್ಬ.ವನ್ನು ತಮ್ಮ ಪತ್ನಿ ಪರಿಮಳ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವಚಂಡಿಕಾ ಯಾಗವನ್ನು ಮಾಡಿಸಿದ್ದರು.
ತಮ್ಮ ಹುಟ್ಟುಹಬ್ಬದಂದು ಜಗ್ಗೇಶ್ ಟ್ವೀಟ್ ಮಾಡಿ, “ನನಗೆ ಜನ್ಮ ಕೊಟ್ಟ ನನ್ನ ದೇವರಿಗೆ ಶರಣು ಶರಣಾರ್ಥಿ.. ತಿಳಿದೋ ತಿಳಿಯದೆಯೋ ನಾನು ಮಾಡಿದ ಸರ್ವ ಅಪರಾಧ ಕ್ಷಮಿಸಿ ಹರಸಿ. ಸಾಧ್ಯವಾದಷ್ಟು ನಿಮ್ಮ ಗೌರವ ಉಳಿಸಿದ ಮಗನಾಗಿ ಗಂಡನಾಗಿ, ತಂದೆಯಾಗಿ, ತಾತನಾಗಿ ಸಮಾಜಕ್ಕೆ ತಲೆಬಾಗಿ ಗೌರವದಿಂದ ಬಾಳಿ ಬದುಕಿ ಅಸ್ತಮದ ಕಡೆಗೆ ನಡೆದಿದೆ ನಿಮ್ಮ ಮಗನ ಬದುಕು. ಇಂದಿಗೆ ನಾನು ಮಾಗುತ್ತಿರುವ 55ರ ಮನುಜ. ಈ ಸಮಯದಲ್ಲಿ ಹರಸಿದ ಆತ್ಮಗಳಿಗೆ ಶರಣು” ಎಂದು ಬರೆದುಕೊಂಡಿದ್ದರು.