Bengaluru CityCinemaKarnatakaLatestMain PostSandalwood

ಡಬ್ಬಿಂಗ್ ವಿರೋಧಿಗಳಿಗೆ ಚಾಟಿ ಬೀಸಿದ ನಟ ಜಗ್ಗೇಶ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಡಬ್ಬಿಂಗ್ ವಿಚಾರದ ಬಗ್ಗೆ ಮತ್ತೆ ಗುಡುಗಿದ್ದಾರೆ.

ಜೆಪಿನಗರದ ದೊಡ್ಡ ಪಬ್‍ನಲ್ಲಿ ಮುಗುಳು ನಗೆ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಿಗೆ ಸೇರಿದ್ರು. ಸೆಟ್‍ನಲ್ಲಿ ಸಖತ್ ಮಸ್ತ್ ಮಜಾ ಮಾಡ್ತಿದ್ದ ಸಿನಿಮಾ ತಂಡ ಪಬ್ಲಿಕ್ ಟಿವಿ ಜೊತೆ ಮಾತಿಗೆ ಇಳೀತು. ಈ ವೇಳೆ ಜಗ್ಗೇಶ್ ಸ್ಯಾಂಡಲ್‍ವುಡ್‍ನಲ್ಲಿ ನಡೆಯುತ್ತಿರುವ ಡಬ್ಬಿಂಗ್ ವಿಚಾರವಾಗಿ ಸ್ವಲ್ಪ ಗರಂ ಆದ್ರು.

ಡಬ್ಬಿಂಗ್ ವಿರೋಧಿಗಳಿಗೆ ಚಾಟಿ ಬೀಸಿದ ನಟ ಜಗ್ಗೇಶ್

ಡಬ್ಬಿಂಗ್ ವಿಚಾರದಲ್ಲಿ ಜಗ್ಗೇಶ್ ಧ್ವನಿ ಎತ್ತಿದ್ದಕ್ಕೆ ಕೆಲವರು ಅವರ ಬಗ್ಗೆ, ಅವರ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರಂತೆ. ಇದರಿಂದ ಕುಪಿತರಾದ ಜಗ್ಗೇಶ್, ಹಿಂದೆ ಮಾತನಾಡುವ ಮಂದಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ಏನೇನ್ ನಡೆಯುತ್ತೆ ನಡೆಯಲಿ. ಶಾರದೆ ನನಗೆ ಎಲ್ಲವನ್ನೂ ಕೊಟ್ಟಿದ್ದಾಳೆ. ನನ್ನ ಉದ್ದೇಶ ಈ ಉದ್ಯಮ ಉಳಿಯಲಿ ಅನ್ನೋದು ಅಷ್ಟೆ. ಇದನ್ನ ಮಧ್ಯದಲ್ಲಿ ಯಾರ್ಯಾರೋ ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಅವರ ಬೆನ್ನ ಹಿಂದೆ ತುಂಬಾ ದೊಡ್ಡ ತಲೆಗಳಿವೆ. ನನ್ನ ರಾಜಕೀಯದ ಬಗ್ಗೆ ಎಲ್ಲಾ ಮಾತನಾಡ್ತಿದ್ದಾರೆ. ಈ ರಾಜ್ಯಕ್ಕೇ ಉತ್ತರ ಕೊಟ್ಟಿದ್ದೇನೆ. ಚಿಕ್ಕ ಚಿಕ್ಕ ಹುಡುಗರಿಗೆಲ್ಲಾ ನಾನು ಈ ಮೆಸೇಜ್ ಹೇಳೋಕೆ ಹೋಗಲ್ಲ. ಅವರೆಲ್ಲಾ ತೃಣಕ್ಕೆ ಸಮಾನ ಅಂದ್ರು.

ಡಬ್ಬಿಂಗ್ ವಿರೋಧಿಗಳಿಗೆ ಚಾಟಿ ಬೀಸಿದ ನಟ ಜಗ್ಗೇಶ್

ಒಟ್ನಲ್ಲಿ ಮುಗುಳು ನಗೆ ಸೆಟ್ ಗೆ ಭೇಟಿ ಕೊಟ್ಟಿದ್ದರಿಂದ ಡಬ್ಬಿಂಗ್ ಬಗ್ಗೆ ಜಗ್ಗೇಶ್ ತನ್ನ ಮನದಾಳವನ್ನು ಹೇಳಿಕೊಂಡ್ರು. ಮುಂದಿನ ದಿನಗಳಲ್ಲಿ ಡಬ್ಬಿಂಗ್ ವಿಚಾರ ಯಾವ ಟರ್ನ್ ಪಡೆಯುತ್ತೆ ಕಾದು ನೋಡ್ಬೇಕು.

Related Articles

Leave a Reply

Your email address will not be published. Required fields are marked *