ಬೆಂಗಳೂರು: ನವರಸ ನಾಯಕ ಜಗ್ಗೇಶ್ ಡಬ್ಬಿಂಗ್ ವಿಚಾರದ ಬಗ್ಗೆ ಮತ್ತೆ ಗುಡುಗಿದ್ದಾರೆ.
ಜೆಪಿನಗರದ ದೊಡ್ಡ ಪಬ್‍ನಲ್ಲಿ ಮುಗುಳು ನಗೆ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಿಗೆ ಸೇರಿದ್ರು. ಸೆಟ್‍ನಲ್ಲಿ ಸಖತ್ ಮಸ್ತ್ ಮಜಾ ಮಾಡ್ತಿದ್ದ ಸಿನಿಮಾ ತಂಡ ಪಬ್ಲಿಕ್ ಟಿವಿ ಜೊತೆ ಮಾತಿಗೆ ಇಳೀತು. ಈ ವೇಳೆ ಜಗ್ಗೇಶ್ ಸ್ಯಾಂಡಲ್‍ವುಡ್‍ನಲ್ಲಿ ನಡೆಯುತ್ತಿರುವ ಡಬ್ಬಿಂಗ್ ವಿಚಾರವಾಗಿ ಸ್ವಲ್ಪ ಗರಂ ಆದ್ರು.
Advertisement
Advertisement
ಡಬ್ಬಿಂಗ್ ವಿಚಾರದಲ್ಲಿ ಜಗ್ಗೇಶ್ ಧ್ವನಿ ಎತ್ತಿದ್ದಕ್ಕೆ ಕೆಲವರು ಅವರ ಬಗ್ಗೆ, ಅವರ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರಂತೆ. ಇದರಿಂದ ಕುಪಿತರಾದ ಜಗ್ಗೇಶ್, ಹಿಂದೆ ಮಾತನಾಡುವ ಮಂದಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
Advertisement
ಏನೇನ್ ನಡೆಯುತ್ತೆ ನಡೆಯಲಿ. ಶಾರದೆ ನನಗೆ ಎಲ್ಲವನ್ನೂ ಕೊಟ್ಟಿದ್ದಾಳೆ. ನನ್ನ ಉದ್ದೇಶ ಈ ಉದ್ಯಮ ಉಳಿಯಲಿ ಅನ್ನೋದು ಅಷ್ಟೆ. ಇದನ್ನ ಮಧ್ಯದಲ್ಲಿ ಯಾರ್ಯಾರೋ ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಅವರ ಬೆನ್ನ ಹಿಂದೆ ತುಂಬಾ ದೊಡ್ಡ ತಲೆಗಳಿವೆ. ನನ್ನ ರಾಜಕೀಯದ ಬಗ್ಗೆ ಎಲ್ಲಾ ಮಾತನಾಡ್ತಿದ್ದಾರೆ. ಈ ರಾಜ್ಯಕ್ಕೇ ಉತ್ತರ ಕೊಟ್ಟಿದ್ದೇನೆ. ಚಿಕ್ಕ ಚಿಕ್ಕ ಹುಡುಗರಿಗೆಲ್ಲಾ ನಾನು ಈ ಮೆಸೇಜ್ ಹೇಳೋಕೆ ಹೋಗಲ್ಲ. ಅವರೆಲ್ಲಾ ತೃಣಕ್ಕೆ ಸಮಾನ ಅಂದ್ರು.
Advertisement
ಒಟ್ನಲ್ಲಿ ಮುಗುಳು ನಗೆ ಸೆಟ್ ಗೆ ಭೇಟಿ ಕೊಟ್ಟಿದ್ದರಿಂದ ಡಬ್ಬಿಂಗ್ ಬಗ್ಗೆ ಜಗ್ಗೇಶ್ ತನ್ನ ಮನದಾಳವನ್ನು ಹೇಳಿಕೊಂಡ್ರು. ಮುಂದಿನ ದಿನಗಳಲ್ಲಿ ಡಬ್ಬಿಂಗ್ ವಿಚಾರ ಯಾವ ಟರ್ನ್ ಪಡೆಯುತ್ತೆ ಕಾದು ನೋಡ್ಬೇಕು.
೬ಸಾವಿರ ಕನ್ನಡಚಿತ್ರದ ಕಾರ್ಮಿಕರ ಭವಿಷ್ಯ ಹಾಗು ನಮ್ಮ ಕನ್ನಡದ ಹೊಸ ಯುವಪೀಳಿಗೆಯ ಭವಿಷ್ಯಅಡಗಿದೆ!ನಾವು ದುಡಿದು ದಡಸೇರಿದ್ದೇವೆ. ಪಾಪ ಮುಂದಿನಪೀಳಿಗೆ ಪಾಡು?
— ನವರಸನಾಯಕ ಜಗ್ಗೇಶ್ (@Jaggesh2) February 28, 2017
೩೪ವರ್ಷ ಕನ್ನಡಬಿಟ್ಟು ಬೇರೆಭಾಷೆಗೆ ಎಡಗಾಲು ಇಡದೆ ಪವಿತ್ರವಾಗಿ ಬದುಕಿದ್ದೇನೆ,ಕನ್ನಡಿಗನಾಗಿ ಕನ್ನಡಪರ ಮಾತಾಡುವಹಕ್ಕು ನನಗಿದೆ!ತೆವಲಿನ ಮಾತಿಗೆ ಮನ್ನಣೆ ಇಲ್ಲ!
— ನವರಸನಾಯಕ ಜಗ್ಗೇಶ್ (@Jaggesh2) February 28, 2017
ಕನ್ನಡಕ್ಕೆ ದ್ರೋಹ ಬಗೆದರೆ ದೇವರು,ನನ್ನತಂದೆತಾಯಿ,ಸ್ನೇಹಿತ,ಬಂಧು ಯಾರೇಆದ್ರೂ ಅವರಿಂದ ನಾನು ದೂರಉಳಿಯುವೆ!ನನಗೆ ನನ್ನಭಾಷೆ ಮುಖ್ಯ:)
— ನವರಸನಾಯಕ ಜಗ್ಗೇಶ್ (@Jaggesh2) February 26, 2017
ಇಂದು ಸಿನಿಮಾ,ನಾಳೆ ನಮ್ಮನೆಲ,ನಾಡಿದ್ದು ನಮ್ಮಯುವಕರ ಕೆಲಸ!ಬಿಟ್ಟರೆ ನಮ್ಮ ಹೂಳುವ ಜಾಗವು ಕೇಳುತಾರೆ!ಬೇಕಾದರೆ ಹೋರಾಡಿ!ಬೇಡವಾದರೆ ಬಿಟ್ಟಾಕಿ!
— ನವರಸನಾಯಕ ಜಗ್ಗೇಶ್ (@Jaggesh2) February 26, 2017
ಸಮುದ್ರಮಥನ ಆದಾಗ ದೇವಾ ದಾನವ ಯುದ್ಧದಲ್ಲಿ ದೇವನೇ ಗೆದ್ದಿದ್ದು!ನಮ್ಮಭಾಷೆ ನಮ್ಮದೇವರು:)
— ನವರಸನಾಯಕ ಜಗ್ಗೇಶ್ (@Jaggesh2) February 26, 2017
ರಾಜ್ಯಾಂಗದಭಾಗ ನೀವುಕೂಡ!ನಿಮ್ಮಂಥ ಯುವಜನತೆ ಯಾರದೋತಪ್ಪಿಗೆ ಎಲ್ಲರನ್ನ ಒಂದೆತಕ್ಕಡಿಯಲ್ಲಿ ಹಾಕಿ ದೂರವಾದರೆ!ಮುಂದೆ ನಿಮ್ಮಹೊಣೆಗೆ ಯಾರಿರಬೇಕು?ರಾಜಕೀಯ ನನ್ನಜೀವನವಲ್ಲಾ! https://t.co/xzBqKPSiU1
— ನವರಸನಾಯಕ ಜಗ್ಗೇಶ್ (@Jaggesh2) February 26, 2017