ಹುಲಿ ಉಗುರು ಪೆಂಡೆಂಟ್‌ ವಿಚಾರವಾಗಿ ವರ್ತೂರುಗೆ ಕುಟುಕಿದ ಜಗ್ಗೇಶ್‌

Public TV
1 Min Read
jaggesh

ಹುಲಿ ಉಗುರಿನ ಪೆಂಡೆಂಟ್ ವಿಚಾರವಾಗಿ ಇದೀಗ ‘ಬಿಗ್ ಬಾಸ್ ಕನ್ನಡ 10’ (Bigg Boss Kannada 10) ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಜಗ್ಗೇಶ್ (Jaggesh) ಮಾತನಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ‘ಕಿತ್ತೋದ್ ನನ್ ಮಗ’ ಎಂದು ವರ್ತೂರು ಸಂತೋಷ್‌ಗೆ (Varthur Santhosh) ಜಗ್ಗೇಶ್ ಕುಟುಕಿದ್ದಾರೆ. ಇದನ್ನೂ ಓದಿ:ಜಗ್ಗೇಶ್ ಹುಲಿ ಉಗುರು ಕೇಸ್ ನಲ್ಲಿ ಸಹಾಯಕ್ಕೆ ಬಂದಿದ್ದು ಡಿಕೆಶಿ

Jaggesh 1

ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು ಎಂದು ಜಗ್ಗೇಶ್ ಹೇಳಿದ್ದರು.

Varthuru Santhosh

ಸಂತೋಷ್ ಬಗ್ಗೆ ಜಗ್ಗೇಶ್ ಈ ರೀತಿ ಹೇಳಿದ್ದಾರೆ, ಜಗ್ಗೇಶ್ ಅಂತಹವರು ‘ಕಿತ್ತೋದ್ ನನ್ಮಗ’ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಹಿರಿಯ ನಟ ಜಗ್ಗೇಶ್ ಬಗ್ಗೆ ಪರ ಮತ್ತು ವಿರೋಧವಾಗಿ ಚರ್ಚೆ ಶುರುವಾಗಿದೆ.

ಮೂರು ತಿಂಗಳ ಹಿಂದೆ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಅದರಿಂದ ಜೈಲಿಗೆ ಕೂಡ ಹೋಗಿದ್ದರು. ಆನಂತರ ಜಾಮೀನು ಪಡೆದು ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅನೇಕರಿಗೆ ಸಂಕಷ್ಟ ಎದುರಾಗಿತ್ತು. ಹುಲಿ ಉಗುರಿನ ವಿವಾದ ಜಗ್ಗೇಶ್ ಅವರಿಗೂ ಬಿಸಿ ಮುಟ್ಟಿಸಿತ್ತು. ಹಾಗಾಗಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ನಟ ಮಾತನಾಡಿದ್ದಾರೆ.

Share This Article