Connect with us

Bengaluru City

ಕಿರಿಕ್ ಸಂಯುಕ್ತಾಗೆ ಜಗ್ಗೇಶ್ ಕ್ಲಾಸ್

Published

on

ಬೆಂಗಳೂರು: ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಹೋಗಿದ್ದ ನಟಿ ಸಂಯುಕ್ತಾಗೆ ಹಿರಿಯ ನಟ ಜಗ್ಗೇಶ್ ಟ್ವಿಟರ್‍ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಅವರ ಮೇಲೆ ಕೈ ಮಾಡಿರುವ ಕಾರಣ ಈ ಸ್ತ್ರೀ ಕುಲಕ್ಕೇ ಕಳಂಕ ಎಂದಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ..! ಇಂಥಹ ಅರ್ಧ ಬೆಂದ ಮಡಕೆ ನೋಡಿಯೇ ನಮ್ಮ ಪೂರ್ವಿಕರು ನುಡಿದಿರಬಹುದು. ಆಚಾರ್ಯರ ಮೇಲೆ ಕೈ ಮಾಡಿದ ಈಕೆ ಕ್ಷಮೆಗೆ ಅನರ್ಹ. ಭವಿಷ್ಯ ಬೆಳೆದ ವಾತಾವರಣ ಸರಿ ಇಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದ್ದರು. ಬಂದು 15 ದಿನ ಕಳೆದಿರಲಿಲ್ಲ, ಆಗಲೇ ಭಾರೀ ರಂಪಾಟ ಮಾಡಿ ಹೊರಹೋಗಿದ್ದಾರೆ. ಕಾಲೇಜು ಕುಮಾರ ಸಿನಿಮಾ ವಿಚಾರದಲ್ಲೂ ಈ ನಟಿ ಕಿರಕ್ ಮಾಡಿ ಸುದ್ದಿಯಾಗಿದ್ದರು.

ಇದನ್ನೂ ಓದಿ: ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

ಆಗಿದ್ದೇನು?: ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ಮುಟ್ಟಿದ್ರೆ ತಟ್ಬೀಡ್ತಿನಿ ಅಂದವರು ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್‍ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ.

ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ ನಿಂತಿತು. ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು. ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು ಮನೆಯಿಂದ ಬೀಳ್ಕೊಟ್ಟರು.

Click to comment

Leave a Reply

Your email address will not be published. Required fields are marked *