ಬೆಂಗಳೂರು: ನವರಸ ನಾಯಕ ಜಗ್ಗೇಶ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಧ್ಯೆಯ ಟ್ವಿಟ್ಟರ್ ವಾರ್ ಮುಂದುವರಿದಿದೆ. ಮಂಗಳವಾರ ಮಾಜಿ ಸಂಸದೆ ರಮ್ಯಾ ಫೇಕ್ ಫೇಸ್‍ಬುಕ್ ಅಕೌಂಟ್ ಬಗ್ಗೆ ಪಾಠ ಮಾಡಿದ್ದಕ್ಕೆ ಜಗ್ಗೇಶ್ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫೇಕ್ ಖಾತೆ ಹೊಂದಿದ್ರೆ ತಪ್ಪಲ್ಲ : ರಮ್ಯಾ ಮೇಡಂ ಪಾಠದ ವಿಡಿಯೋ ಫುಲ್ ವೈರಲ್
ಇದು ಫೇಕ್‍ಗಳನ್ನು ತಯಾರಿಸಿ ವೈರಲ್ ಮಾಡಿ ಬದಕೋ ಫೇಕ್‍ಗಳು. ಇನ್ಮುಂದೆ ನಿಮ್ ಆಟ ಬಂದ್. ಮಹಾಜನತೆಗೆ ಅರಿವಾಯಿತು ಫೇಕ್ ನಾಟಕ ಕಂಪನಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ. ಏನ್ ಕರ್ಮ ರೀ ಈ ದೇಶ ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು
ಸರಣಿ ಟ್ವೀಟ್‍ಗಳ ಮೂಲಕ ಪದ್ಮಾವತಿಗೆ ಜಗ್ಗೇಶ್ ಪರೋಕ್ಷ ಟಾಂಗ್ ನೀಡಿದ್ದಾರೆ. ಫೇಕ್ ಅಕೌಂಟ್‍ಗಳ ಬಗ್ಗೆ ಪಾಠ ಕಲಿಸುವ ಸಭ್ಯಸ್ಥೆಯನ್ನು ಕಣ್ಣಗಲಿಸಿ ನೋಡಿ. ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಾಂತಿ ಮಾಡುವವರು ಇವರೆ!. ಹೇಗೆ ತಯಾರು ಮಾಡ್ತಾರೆ ನೋಡಿ ಅರ್ಧಬೆಂದ ಮಡಿಕೆಗಳ..! ಅಂತ ರಮ್ಯಾ ಹೆಸರೇಳದೇ ಕ್ಯಾಚ್ ಆಫೀಸರ್ ಎಂದು ಜರಿದಿದ್ದಾರೆ. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ
ಒಟ್ಟಿನಲ್ಲಿ ರಮ್ಯಾ ಅವರ `ಮಾದಕದ್ರವ್ಯದ ನಶೆ’ ಟ್ವೀಟ್‍ನಿಂದ ಇದೀಗ ಜಗ್ಗೇಶ್-ರಮ್ಯಾ ಟ್ವೀಟ್ ವಾರ್ ತೀವ್ರ ಸ್ವರೂಪ ಪಡೆದಿದೆ.
ಕಣ್ಣಗಲಿಸಿ ನೋಡಿ fake account ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ ಭಾರತದ ನಾಗರೀಕ ಕುಲವಂತರು!ಇವಳ ಪಾಠಕಲಿತು ನೆನ್ನೆಯಿಂದ ಸಾಮಾಜಿಕತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೆ!ಹೇಗೆ ತಯಾರು ಮಾಡುತ್ತಾರೆ ನೋಡಿ ಅರ್ಧಬೆಂದ ಮಡಕೆಗಳ!per person 15.000 payment
ದೌರ್ಭಾಗ್ಯ ಇಂಥ fake ಗಳ ನಿನ್ನೆ ನೋಡಿ ಮಾಧ್ಯಮಮಿತ್ರರು ಎಡವಿಬಿಟ್ಟರೆ! https://t.co/UWIJkCeM4j
— ನವರಸನಾಯಕ ಜಗ್ಗೇಶ್ (@Jaggesh2) February 6, 2018
Fake account ತುಕಾಲಿಗಳಿಗೆ ಏನ್ರಿ ಗೊತ್ತು ನನ್ನ ದೇವರ ಸಂಬಂಧ..! ಮಾಯಾಂಗನೆ ಮಾರ್ಗದರ್ಶನ ಇದು!
ಅಂಬರೀಶರನ್ನ stage ಇಂದ ಯುವರಾಜನಿಗೆ signal ಕೊಟ್ಟು ತಳ್ಳಿಸಿದ ಮಹನೀಯಳು!ಅಂಬರೀಶ್ ಭಕ್ತರು ಯಾಕ್ ಇನ್ನು ಸುಮ್ಮನಿದ್ದಾರೆ ಗೊತ್ತಿಲ್ಲಾ!! https://t.co/PKTFKlHxyi
— ನವರಸನಾಯಕ ಜಗ್ಗೇಶ್ (@Jaggesh2) February 6, 2018
ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ! Catch officer! ಎನ್ ಕರ್ಮ ರೀ ಈ ದೇಶ.. ಅದಕ್ಕೆ ಇವತ್ತು ಅನೇಕ ಕುಟುಂಬಗಳು fake ವರದಕ್ಷಿಣೆ caseಯಿಂದ ಅಮಾಯಕ ಗಂಡ ತಂದೆತಾಯಿ ಜೈಲುಭಾಗ್ಯ ಪಡೆಯುತ್ತಿದ್ದಾರೆ! https://t.co/1NOHxLCVjn
— ನವರಸನಾಯಕ ಜಗ್ಗೇಶ್ (@Jaggesh2) February 6, 2018
ಇದು fakeಗಳನ್ನ ತಯಾರಿಸಿ viral ಮಾಡಿ ಬದುಕೋ fakeಗಳು!
ಇನ್ಮುಂದೆ ನಿಮ್ ಆಟ ಬಂದ್!
ಮಹಾಜನತೆಗೆ ಅರಿವಾಯಿತು fake ನಾಟಕ ಕಂಪನಿ! https://t.co/rBMC7HERbj
— ನವರಸನಾಯಕ ಜಗ್ಗೇಶ್ (@Jaggesh2) February 6, 2018
https://t.co/VQ1N7zspIm
ನೋಡಿ ಕನ್ನಡಿಗರ ಕಣ್ಮಣಿ #ಮಂಡ್ಯದಗಂಡ ನ್ನ ಮಾಯಾಂಗನೆ ಮರ್ಮಕಲೆಯಿಂದ ಹೇಗೆ ತಳ್ಳಿಸುತ್ತಾಳೆ! ಸ್ವಾಭಿಮಾನಿ ಕನ್ನಡಿಗರಾದರೆ ಕೊಡಿ ಉತ್ತರ!
ಇಂತವರಿಗೆ!
— ನವರಸನಾಯಕ ಜಗ್ಗೇಶ್ (@Jaggesh2) February 6, 2018