ಬೆಂಗಳೂರು: ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಭಾರತೀಯ ವಾಯುಪಡೆಯು ಇಂದು ಪಾಕಿಸ್ತಾನ ಹಾಗೂ ಉಗ್ರರಿಗೆ ಬಿಸಿ ಮುಟ್ಟಿಸಿದೆ. ಈ ಸಂಬಂಧ ನವರಸನಾಯಕ ಜಗ್ಗೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.
ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ನನ್ನ ಅನಿಸಿಕೆ ತಿಳಿಸಿದ್ದೆ. ಆಗ ಕೆಲ ಸಹೋದರರು ಉದ್ರೇಕಗೊಂಡರು. ಆದರೆ ಇಂದು ಅವರಿಗೆ ದೇಶ ಮೆಚ್ಚುವ ಪ್ರಧಾನಿ ಮೋದಿ ನೇತೃತ್ವ ಕಾಯಕ ಅರಿವಾಗಿದ್ದರೆ ನನ್ನ ಅನಿಸಿಕೆ ಸಾರ್ಥಕವಾದಂತೆ ಎಂದು ಹೇಳಿದ್ದಾರೆ.
Advertisement
“ನುಡಿದ್ದದ್ದು ನಾನಲ್ಲ, ನನ್ನ ಕಾಲಭೈರವ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉತ್ತರ ಪ್ರದೇಶದ ಪ್ರಯಾಗ್ ಕುಂಭಸ್ನಾನದ ವೇಳೆ ಕಪ್ಪು ಬಟ್ಟೆ ಹಾಕಿದ್ದರು. ಅದು ನಾಥ ಸಂಪ್ರದಾಯ, ಅಂದರೆ ‘ಕಾಲಭೈರವನಿಗೆ’ ಶತ್ರುಸಂಹಾರಕ್ಕೆ ಸೂಚಿಸಿದಂತೆ ಎಂದು ಜಗ್ಗೇಶ್ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ.
Advertisement
ಯಾಕೆ @narendramodi ಮತ್ತೊಮ್ಮೆ
ಎಂದು ನಾನು ಹೇಳಿದಾಗ ಉದ್ರೇಕಗೊಂಡ (ಕೆಲವರು ಸಹೋದರರು)ಮಾತ್ರ!ಅವರಿಗೆ ಇಂದು ಅರಿವಾಗಿದ್ದರೆ ಮೋದಿರವರ ದೇಶ ಮೆಚ್ಚುವ ಕಾಯಕ!ಸಾರ್ಥಕ ನನ್ನ ಅನಿಸಿಕೆ!
"ನುಡಿದ್ದದ್ದು ನಾನಲ್ಲಾ ನನ್ನ ಕಾಲಭೈರವ"
ನೆನ್ನೆ ಮೋದಿ ಕಪ್ಪುಬಟ್ಟೆ ಹಾಕಿ ಕುಂಭಸ್ನಾನ ಮಾಡಿದ್ದು ನಾಥ ಸಂಪ್ರದಾಯ ಅಂದರೆ "ಕಾಲಭೈರವನಿಗೆ"
ಶತೃಸಂಹಾರಕ್ಕೆ!
— ನವರಸನಾಯಕ ಜಗ್ಗೇಶ್ (@Jaggesh2) February 26, 2019
Advertisement
ಸ್ಯಾಂಡಲ್‍ವುಡ್ ನಾಯಕರು ಟ್ವೀಟ್ ಮೂಲಕ ಸರ್ಜಿಕಲ್ ಸ್ಟ್ರೈಕ್ 2 ಮಾಡಿದ ವಾಯು ಪಡೆ ಹಾಗೂ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಟ ಧ್ರವಾ ಸರ್ಜಾ ಅವರು, ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕಾ ಬರಬೇಡಾ.. ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ ಎಂದು ಟ್ವೀಟ್ ಮಾಡಿ ಭಾರತೀಯರ ಪೊಗರಿನ ಬಗ್ಗೆ ಪಾಕಿಸ್ತಾನದವರಿಗೆ ತಿಳಿಸಿಕೊಟ್ಟಿದ್ದಾರೆ.
Advertisement
ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv