ಬೆಂಗಳೂರು: ಹಿರಿಯ ನಟ ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.
ಈ ಬೆಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಎಂಥ ದುರ್ದೈವ. ಅವರ ಅನುಭವ ಚಿತ್ರಕ್ಕೆ ನನಗೆ ಪಾತ್ರಕೊಡಿಸಲು ನನ್ನ ಗುರುಗಳು ಛಾಯಾಗ್ರಹಕ ಸುಂದರ್ ನಾಥ ಸುವರ್ಣ ರವರು ಕರೆದುಕೊಂಡು ಹೋಗಿದ್ದರು. ಅವಕಾಶ ಸಿಗಲಿಲ್ಲ. ಆದರೆ ಮುಂದೆ ಅವರ ಜೊತೆ “ಮನ್ಮಥ” ಚಿತ್ರದಲ್ಲಿ ನಟಿಸಿದೆ. ತುಂಬ ಸಾಧು ಸ್ವಭಾವದ ಮನುಷ್ಯ. ಯಾರಿಗೂ ನೋಯಿಸದ ಸ್ನೇಹಜೀವಿ. ಇಷ್ಟುಬೇಗ ಹೋದರ ಎಂದು ನೋವಾಯಿತು. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದಿದ್ದಾರೆ.
Advertisement
Advertisement
ಅಂದಿನ ದಿನದಲ್ಲಿ ಸಣ್ಣ ಬಡ್ಜೆಟ್ ಚಿತ್ರ ನಿರ್ಮಾಣ, ನಿರ್ದೇಶನ ಮಾಡಿ 36ವಾರ ಸಿನಿಮ ಓಡಿ ಬಹುತೇಕ ಸ್ಟಾರ್‍ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ. ಅವರ ಸಂಭಾವನೆ ಆ ಕಾಲದಲ್ಲೇ 5ಲಕ್ಷ, ನನಗೆ 4,000. ಯಾವಾಗ ಅವರಷ್ಟು ಸಂಭಾವನೆ ನನಗೆ ಸಿಗುತ್ತೆ ಅಂತ 90ಹಾಕಿ ಯೋಚಿಸುತ್ತಿದ್ದೆ. ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ
Advertisement
ಎಂಥ ದುರ್ದೈವ.ಅವರ ಅನುಭವ ಚಿತ್ರಕ್ಕೆ ನನಗೆ ಪಾತ್ರಕೊಡಿಸಲು ನನ್ನ ಗುರುಗಳು ಛಾಯಾಗ್ರಹಕ ಸುಂದರ್ ನಾಥ ಸುವರ್ಣ ರವರು ಕರೆದುಕೊಂಡು ಹೋಗಿದ್ದರು.ಅವಕಾಶ ಸಿಗಲಿಲ್ಲಾ.ಆದರೆ ಮುಂದೆ ಅವರ ಜೊತೆ"ಮನ್ಮಥ"ಚಿತ್ರದಲ್ಲಿ ನಟಿಸಿದೆ.
ತುಂಬ ಸಾಧುಸ್ವಭಾವದ ಮನುಷ್ಯ.ಯಾರಿಗು ನೋಯಿಸದ ಸ್ನೇಹಜೀವಿ.ಇಷ್ಟುಬೇಗ ಹೋದರ ಎಂದು ನೋವಾಯಿತು.ಅವರಆತ್ಮಕ್ಕೆ ಶಾಂತಿಸಿಗಲಿRIP https://t.co/aXH16jOjjr
— ನವರಸನಾಯಕ ಜಗ್ಗೇಶ್ (@Jaggesh2) January 18, 2018
Advertisement
ಅಂದಿನ ದಿನದಲ್ಲಿ ಸಣ್ಣಬಡ್ಜಟ್ ಚಿತ್ರ ನಿರ್ಮಾಣ ನಿರ್ದೇಶನ ಮಾಡಿ 36ವಾರ ಸಿನಿಮ ಓಡಿ ಬಹುತೇಕ ಸ್ಟಾರಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ..ಅವರ ಸಂಭಾವನೆ ಆ ಕಾಲದಲ್ಲೆ5ಲಕ್ಷ ನನಗೆ 4,000 ಯಾವಾಗ ಅವರಷ್ಟು ಸಂಭಾವನೆ ನನಗೆ ಸಿಗುತ್ತೆ ಅಂತ 90ಹಾಕಿ ಯೋಚಿಸುತ್ತಿದ್ದೆ..ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್..
— ನವರಸನಾಯಕ ಜಗ್ಗೇಶ್ (@Jaggesh2) January 18, 2018
30ದಿನ ಅವರ ಜೂತೆ"ಮನ್ಮಥ" ಚಿತ್ರದಲ್ಲಿ ಕೆಲಸಮಾಡಿದ್ದೆ..ನಾನು ಅಂಬೆಗಾಲಿಡುತ್ತಿದ್ದ ಸಮಯ ಆದರು ನನ್ನನ್ನ ಅವರ ಸಮಾನವಾಗೆ ಗೌರವಿಸುತ್ತಿದ್ದರು..ನನ್ನ ಟೈಮಿಂಗ್ ನೋಡಿ ಆನಂದಿಸುತ್ತಿದ್ದರು..ಆ ಚಿತ್ರ ಹಿಟ್ ಆದಾಗ ನನ್ನ ಬಗ್ಗೆ ಉಧ್ಯಮದಲ್ಲಿ ಶಿಫಾರಸ್ಸು ಮಾಡುತ್ತಿದ್ದರು..ಮತ್ತೆ ಒಟ್ಟಿಗೆ ನಟಿಸುವ ಅವಕಾಶ ಬರವಿಲ್ಲಾ..ಆದರು ವಿಶ್ವಾಸ ಉಳಿದಿತ್ತು..
— ನವರಸನಾಯಕ ಜಗ್ಗೇಶ್ (@Jaggesh2) January 18, 2018
ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ..
ಮಿಕ್ಕಂತೆ ಅವರ ಉಳಿವು ಅಭಿಮಾನಿಗಳ ಹೃದಯದಲ್ಲಿ ಅಜರಾಮರ..
ಕಲಾವಿದ ಸತ್ತರು ಅವನ ಕಾಯಕ ಜೀವಂತ..
ಕಾಶಿನಾಥ್ ಸಾರ್ ನೀವು ಹೋದರು
ನಿಮ್ಮಕಾಯಕ ಬಿಟ್ಟು ಹೋಗಿದ್ದೀರಿ..
ನಿಮ್ಮ ಕಳೆದುಕೊಂಡ ನೋವು ಭರಿಸುವ ಶಕ್ತಿ ನಿಮ್ಮಕುಟುಂಬಕ್ಕೆ ರಾಯರು ನೀಡಲಿ..we all love u sir..
— ನವರಸನಾಯಕ ಜಗ್ಗೇಶ್ (@Jaggesh2) January 18, 2018
ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.
43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.
11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.