ಹುಲಿ ಉಗುರು ಪೆಂಡೆಂಟ್ ಆಗಿ ಧರಿಸಿದ್ದಕ್ಕೆ ವರ್ತೂರ್ ಸಂತೋಷ್ (Varthur Santhosh) ಈಗಾಗಲೇ ಜೈಲು ಪಾಲಾಗಿದ್ದಾರೆ. ಈ ಬೆನ್ನಲ್ಲೇ ನಟ ದರ್ಶನ್(Darshan) , ಜಗ್ಗೇಶ್ (Jaggesh) ಈ ವಿಚಾರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಅರಣ್ಯಾಧಿಕಾರಿಗಳು ಜಗ್ಗೇಶ್ ಮನೆ ತಪಾಸಣೆ ಮಾಡಿ ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ನಟ ಜಗ್ಗೇಶ್ ಪತ್ನಿ ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಕೊಟ್ಟಿದ್ದಾರೆ: ಅಧಿಕಾರಿಗಳು
Advertisement
ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡಿದ್ದಾರೆ. ಆ ದೇವರುಗಳಿಗೆ ಧನ್ಯವಾದ. ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ ಪಾಚ್ಕೊಳಿ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಹುಲಿ ಉಗುರಿನ ಸಂಕಷ್ಟದ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ.
Advertisement
ಕಾನೂನು ದೊಡ್ಡದು????
ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ!
ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ!
ಎಷ್ಟೋ ದೋಚುವ ಮನುಷ್ಯರು,
ಕೊಲೆ ಪಾತಕರು,
ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ????ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ. pic.twitter.com/mWu5aXpXmp
— ನವರಸನಾಯಕ ಜಗ್ಗೇಶ್ (@Jaggesh2) October 25, 2023
Advertisement
ಹುಲಿ ಉಗುರು ಧರಿಸಿದ್ದ (Tiger Claw Pendant) ಆರೋಪ ಹೊತ್ತಿರುವ ನಟ ಜಗ್ಗೇಶ್ ಮನೆಗೆ ಇಂದು ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಜಗ್ಗೇಶ್ ಪತ್ನಿ ಪರಿಮಳಾ ಅವರು, ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಅನ್ನು ಅಧಿಕಾರಿಗಳಿಗೆ ನೀಡಿದ್ದರು. ಮಲ್ಲೇಶ್ವರಂನಲ್ಲಿರುವ ಜಗ್ಗೇಶ್ ಮನೆಗೆ ಆರ್‌ಎಫ್‌ಒ ನೇತ್ರಾವತಿ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವತಃ ಡಿಸಿಎಫ್ ರವೀಂದ್ರ ಅವರು ಕೂಡ ಭೇಟಿ ಕೊಟ್ಟಿದ್ದರು. ಈ ವೇಳೆ ಜಗ್ಗೇಶ್ (Jaggesh) ಅವರ ಪತ್ನಿ ಪೆಂಡೆಂಟ್ ಅನ್ನು ಅಧಿಕಾರಿಗಳಿಗೆ ನೀಡಿದ್ದರು. ಪೂಜೆ ಮಾಡಿ ಇಟ್ಟುಕೊಂಡಿದ್ದೆವು ಎಂದು ಅಧಿಕಾರಿಗಳಿಗೆ ಈ ವೇಳೆ ತಿಳಿಸಿದ್ದರು.
Advertisement
ಈ ಕುರಿತು ಮಾತನಾಡಿರುವ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ನೋಟಿಸ್ ಕೊಟ್ಟಿದ್ದೇವೆ. ಅದಕ್ಕೆ ಪೆಂಡೆಂಟ್ ಕೊಟ್ಟಿದ್ದರು. ನಾವು ಯಾವುದೇ ತಪಾಸಣೆ ನಡೆಸಲಿಲ್ಲ. ಜಗ್ಗೇಶ್ ಮಡದಿ ಪೆಂಡೆಂಟ್, ಲಾಕೆಟ್ ಕೊಟ್ಟಿದ್ದರು. ಜಗ್ಗೇಶ್ ಹೋಗುವಾಗ ಕೊಟ್ಟು ಹೋಗಿದ್ದರು. ಅವರು ಮನೆಯಲ್ಲಿ ಇರಲಿಲ್ಲ ಎಂದು ಮಾಹಿತಿ ನೀಡಿದ್ದರು.
ಜಗ್ಗೇಶ್ ಅವರಿಗೆ ತಾಯಿ ಕೊಟ್ಟಿದ್ದು. ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದರು. 40 ವರ್ಷದಷ್ಟು ಹಳೆಯದಾಗಿದೆ ಪೆಂಡೆಂಟ್. ಹೀಗಾಗಿ ಡಿಎನ್‌ಎ ಪರೀಕ್ಷೆ ಮಾಡಲು ಡೆಹ್ರಾಡೂನ್‌ಗೆ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಜಗ್ಗೇಶ್ ಮನೆಯಲ್ಲಿ ಸಿಕ್ಕ ಪೆಂಡೆಂಟ್ ಕೊಳೆತ ಸ್ಥಿತಿಯಲ್ಲಿ ಇದ್ದು, ಪ್ರಾಥಮಿಕವಾಗಿ ಗೊತ್ತಾಗುತ್ತಿಲ್ಲ. ಸ್ವಲ್ಪ ದಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಮೊದಲು ಪರಿಶೀಲನೆಗೆ ಲ್ಯಾಬ್‌ಗೆ ಕಳುಹಿಸಿ, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದು ನೈಜವಾಗಿದ್ದಲ್ಲಿ ಅವರನ್ನ ಕರೆಸಿ ವಿಚಾರಣೆ ಮಾಡಲಾಗುತ್ತದೆ. ಅದು ಹುಲಿಯ ಉಗುರಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.