ಹಾಡಿನ ಮೂಲಕ ಶ್ರೀರಾಮನನ್ನು ಸ್ಮರಿಸಿದ ಜಗ್ಗೇಶ್

Public TV
1 Min Read
JAGGESH

ಯೋಧ್ಯೆಯ ರಾಮಮಂದಿರ (Ram Mandir) ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗ ಹಾಡುವ ಮೂಲಕ ಶ್ರೀರಾಮನನ್ನು ನಟ ಜಗ್ಗೇಶ್ ಸ್ಮರಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಜಗ್ಗೇಶ್ (Actor Jaggesh) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಶ್ರೀರಾಮನ ನಾಮ ಪಠಿಸಿದ ಗೋಲ್ಡನ್ ಸ್ಟಾರ್- ಇನ್ನಿಬ್ಬರು ಸ್ಟಾರ್ಸ್‌ಗೆ ಗಣೇಶ್‌ ಆಹ್ವಾನ

ಜೈಶ್ರೀರಾಮ್ ಎಂದು ಹೇಳುತ್ತಲೇ ಜಗ್ಗೇಶ್ ಹಾಡಿದ್ದಾರೆ. ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ ಎಂದಿದ್ದಾರೆ. ಶಾಸ್ತ್ರೀಯವಾಗಿ ಬಂದರು ಸರಿ ಇಲ್ಲದಿದ್ದರು ಸರಿ ರಾಮನಿಗಾಗಿ, ಸಂಕೋಚ ಬಿಟ್ಟು ಯತ್ನಿಸಿ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಎಂದು ಅಭಿಮಾನಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ. ರಾಮನಿಗಾಗಿ ಸಣ್ಣಭಕ್ತಿಯ ಪ್ರಯತ್ನವಿದು. ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿ.ವೈ ವಿಜಯೇಂದ್ರ ಅವರಿಗೆ ಜಗ್ಗೇಶ್ ಟ್ಯಾಗ್ ಮಾಡಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆಯುತ್ತಿದೆ. ಕನ್ನಡದ ನಟ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬಹುಭಾಷಾ ಕಲಾವಿದರಿಗೂ ಆಹ್ವಾನ ನೀಡಿದ್ದಾರೆ.

Share This Article