ಬೆಂಗಳೂರು: ನಟ ಜಗ್ಗೇಶ್ ಸಾಮಾನ್ಯರಂತೆ ‘ಕೆಜಿಎಫ್’ ಸಿನಿಮಾ ನೋಡಲು ಲುಂಗಿ, ಹವಾಯಿ ಚಪ್ಪಲಿ ಮತ್ತು ಮಂಕಿಪ್ಯಾಪ್ ಧರಿಸಿ ಚಿತ್ರಮಂದಿರಕ್ಕೆ ಹೋಗಿದ್ದರು. ಈ ವೇಳೆ ಅವರ ಪಕ್ಕ ಕುಳಿತಿದ್ದ ನಟ ದರ್ಶನ್ ಅಭಿಮಾನಿಯ ಮಾತು ಕೇಳಿ ಭಾವುಕರಾಗಿದ್ದಾರೆ.
ನಟ ಜಗ್ಗೇಶ್ ಅವರು, “ನಾನು ಕೆಜಿಎಫ್ ಸಿನಿಮಾ ನೋಡುವಾಗ ನನ್ನ ಪಕ್ಕ ಸುಮಾರು 17 ವರ್ಷದ ಪ್ರಾಯದ ಹುಡುಗ ಹೋಟೆಲ್ ಸರ್ವರ್ ಕೂತಿದ್ದನು. ಅವನ ಜೊತೆ ಧ್ವನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದ್ದೆ. ಪ್ರತಿ ಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ. ಅವನು ಪಕ್ಕ ದರ್ಶನ್ ಅಭಿಮಾನಿಯಾಗಿದ್ದು, ಅವನು ‘ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈ ಅಂತಾರೆ ಈಗ ಅವರ ಪುಂಗಿ ಬಂದ್’ ಅಂದನು. ಅವನು ಹೇಳಿದ ಮಾತಿನಿಂದ ನನ್ನ ಕಣ್ಣು ಒದ್ದೆಯಾಯಿತು” ಎಂದು ಟ್ವೀಟ್ ಮಾಡಿದ್ದಾರೆ.
https://twitter.com/Jaggesh2/status/1077588966033960960
ನಟ ಜಗ್ಗೇಶ್ ಗುರುತು ಸಿಗದಂತೆ ಲುಂಗಿ, ಮತ್ತು ಮಂಕಿ ಕ್ಯಾಪ್ ಧರಿಸಿಕೊಂಡು ಥಿಯೇಟರ್‍ಗೆ ಹೋದಾಗ ಕನ್ನಡ ಅಭಿಮಾನಿಯ ಮಾತು ಕೇಳಿ ಭಾವುಕರಾಗಿದ್ದಾರೆ. ಜಗ್ಗೇಶ್ ಮತ್ತೊಂದು ಟ್ವೀಟ್ ಮಾಡಿ ನಟ ಯಶ್, ನಿರ್ದೇಶಕ ನೀಲ್ ಮತ್ತು ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
“2ಅಕ್ಷರದ ನಟ 3ಅಕ್ಷರದ ಮನಗಳ 2ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ. #hatsoff dear..’ಯಶ್ ಕನ್ನಡ ಮನಗಳ ಖುಷಿ ಪಡಿಸಿದ’ ನಿರ್ದೇಶಕ ನೀಲ್ ಅಸಮಾನ್ಯ ಪ್ರತಿಭೆ. ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ ಮಾಡಿಬಿಟ್ಟಿರಿ. #hombalefilms ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ. ಕೆಜಿಎಫ್ ನೋಡಿ ಖುಷ್ ಆದೆ” ಎಂದು ಟ್ವೀಟ್ ಮಾಡಿದ್ದಾರೆ.
https://twitter.com/Jaggesh2/status/1077581304911122433
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

