– ಬಂಗಾರದಂತಹ ಹುಡುಗರಿಗೆ ಕೈ ಮುಗಿದು ನಮಸ್ಕಾರ
ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿನಂತೆ ಒಂದು ತಿಂಗಳಲ್ಲಿ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಒಂದು ತಿಂಗಳಲ್ಲೇ ಕೊಟ್ಟ ಭರವಸೆ ಉಳಿಸಿಕೊಳ್ಳವಂತೆ ಮಾಡಿದ ಹಿಂದಿನ ಶಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದು, ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ
Advertisement
Advertisement
ಅದರಂತೆಯೇ ಒಂದು ತಿಂಗಳಲ್ಲಿ ಅವರಿಗೆ ಮನೆ ಕಟ್ಟಿಸಿದ್ದಾರೆ. ಇದೇ ತಿಂಗಳ 12ರಂದು ಮನೆಯ ಗೃಹ ಪ್ರವೇಶ ನಡೆಯಲಿದೆ. ಇದೀಗ ಒಂದು ತಿಂಗಳಲ್ಲಿ ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಅದರ ಹಿಂದಿರುವ ಶಕ್ತಿ ಯಾರೆಂದು ಕಾರ್ಯಕ್ರಮವೊಂದರಲ್ಲಿ ಜಗ್ಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್
Advertisement
ಸೋದರಿಯರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ನಾನು ಕೊರಟಗೆರೆ ಅಭಿಮಾನಿ ಸಂಘದ ರವಿಗೆ ಫೋನ್ ಮಾಡಿದ್ದೆ. ಅಯ್ಯೋ ಅಣ್ಣ ಬಿಡಿ ನಾವು ಇದ್ದೀವಿ ಮಾಡುತ್ತೀವಿ ಎಂದನು. ಮರುದಿನ 50-60 ಹುಡುಗರು ತಮ್ಮ ಕೆಲಸಕ್ಕೆ ರಜೆ ಹಾಕಿ ಕೆಲಸ ಮಾಡಿದ್ದಾರೆ. ನಾವು ಒಂದು ತಿಂಗಳಲ್ಲಿ ಅವರಿಗೆ ಮನೆ ಕೀ ಕೊಡಲು ಸಾಧ್ಯವಾಗಿದ್ದೆ ಅವರಿಂದ, ಯಾವುದೇ ಬೇಡಿಕೆಯೂ ಇಲ್ಲದೇ ಒಂದು ತಿಂಗಳಲ್ಲಿ ಮನೆ ಕಟ್ಟಿದ್ದಾರೆ ಎಂದರು.
Advertisement
ಯಾರೋ ಹಣ ಕೊಟ್ಟಿದ್ದಾರೆ ಮಾಡುತ್ತಿದ್ದಾರೆ ಎಂದು ಯಾರೋ ಮಧ್ಯೆ ಹೇಳಿದ್ದರು. ಆದರೆ ಆತ್ಮಸಾಕ್ಷಿಯಾಗಿ ಹೇಳುತ್ತೀನಿ ಆ ಮನೆಯನ್ನು ಸಂಪೂರ್ಣವಾಗಿ ನನ್ನ ಅಭಿಮಾನಿ ಸಂಘದವರೇ ನಿರ್ಮಾಣ ಮಾಡಿದ್ದಾರೆ. ಮಾಡಿದರೆ 100% ಮಾಡಬೇಕು ಎಂದು ಅಷ್ಟೂ ಚೆನ್ನಾಗಿ ಕೆಲಸ ಮಾಡಿರುವ ಆ ಬಂಗಾರದಂತಹ ನನ್ನ ಹುಡುಗರಿಗೆ ನನ್ನ ನಮಸ್ಕಾರಗಳು ಎಂದು ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.
https://www.instagram.com/p/B88YTrMpH2C/
ಅಂಧ ಸಹೋದರಿಯರು:
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು. ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು.