ಬೆಂಗಳೂರು: ಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಹಾಗೂ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ನಡುವೆ ಕ್ಷುಲ್ಲಕ ಕಾರಣಕ್ಕೆ ತಳ್ಳಾಟ ನೂಕಾಟ ನಡೆದಿದ್ದು, ಈ ಬಗ್ಗೆ ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ನವರಸ ನಾಯಕ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ಮಂಡಲ ಮಾದೇಗೌಡರು ನನ್ನ ಬಾವ. ಅವರು ಮಲೇಶ್ವರಂ ನಲ್ಲಿ ಆರ್ಗೆನಿಕ್ ಶಾಪ್ ಇಟ್ಟುಕೊಂಡಿದ್ದಾರೆ. ಮೆಟ್ರೋಗೆಲ್ಲಾ ಅವರೇ ತರಕಾರಿ ಸಪ್ಲೈ ಮಾಡುತ್ತಾರೆ. 2-3 ಸಾವಿರ ಎಕರೆ ಜಮೀನು ಇಟ್ಟುಕೊಂಡು ತರಕಾರಿ ಬೆಳೆದು ಮಾರಾಟ ಮಾಡುತ್ತಾರೆ. ಅವರ ಮಗನಿಗಾಗಿ ಮಲ್ಲೇಶ್ವರಂ 8ನೇ ಕ್ರಾಸ್ ಒಂದು ಔಟ್‍ಲೆಟ್ ಹಾಕಿಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳಿಂದ ಒಬ್ಬ ವ್ಯಕ್ತಿ ಕಾರ್ಪೊರೇಟರ್ ಮಂಜಣ್ಣ ಅವರ ಹೆಸರು ಹೇಳಿಕೊಂಡು ಬೆದರಿಸಿ ರೋಲ್ ಕಾಲ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದನು.
Advertisement
Advertisement
ಈ ಕುರಿತು ನಾನು ಪೊಲೀಸರಿಗೆ ಮಾಹಿತಿ ನೀಡಿ, ಮಂಜಣ್ಣ ಜೊತೆ ಮಾತನಾಡಿದೆ. ಈ ವೇಳೆ ಅವರು ನಮ್ಮ ಕಡೆಯವರು ಯಾರು ಹೋಗಿಲ್ಲ ಎಂದು ಹೇಳಿದ್ದಾರೆ. ಆದ್ರೆ ಶುಕ್ರವಾರ ಮತ್ತೆ ಚೇರ್ ಎಳೆದು ರಂಪಾಟ್ ಮಾಡುತ್ತಿದ್ದಾರೆ ಎಂದು ಕಾಲ್ ಮಾಡಿದ್ದರು. ಹೀಗಾಗಿ ನಾನು ಕಾರ್ಪೊರೇಟರ್ ಹೋಗಿದ್ದೆವು. ನನ್ನನ್ನ ನೋಡಿ ಆ ವ್ಯಕ್ತಿ ಓಡಿ ಹೋಗುತ್ತಿದ್ದನು. ತಕ್ಷಣ ಅವನನ್ನು ಹಿಡಿದು ಇಬ್ಬರು ಪೊಲೀಸರಿಗೆ ಒಪ್ಪಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ನಂತರ ಎಲ್ಲರೂ ಕೂತು ಮಾತನಾಡಿ ಸರಿಪಡಿಸಿಕೊಂಡೆವು.
Advertisement
ಈ ಘಟನೆಯನ್ನು ಯಾರೋ ರೆಕಾರ್ಡ್ ಮಾಡಿ ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಟ್ವಿಟ್ಟರ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿ ನಾಳೆ ಇದೆ ನಿಂಗೆ ಮಾಂಜ.. ಇದನ್ನ ಮಿಡಿಯಾಗಳಿಗೆ ಕೊಡ್ತೇನೆ ಎಂದು ಆ ದುಷ್ಕರ್ಮಿ ಬೆದರಿಸಿದ್ದನು. ಅದೇ ರೀತಿ ಮಾಡಿದ್ದಾನೆ. ಈ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದೇನೆ. ಇದು ಯಾವುದೇ ಪಾನಿಪುರಿ, ತಳ್ಳೋಗಾಡಿ ಗಲಾಟೆ ಅಲ್ಲ. ಔಟ್‍ಲೆಟ್ ನಲ್ಲಿ ನಡೆದಿರುವ ಘಟನೆ ಎಂದು ಜಗ್ಗೇಶ್ ಹೇಳಿದ್ದಾರೆ.
Advertisement
ಆರೋಪ ಏನು?
ಶುಕ್ರವಾರ ರಾತ್ರಿ ಮಲ್ಲೇಶ್ವರಂ 8ನೇ ಕ್ರಾಸ್ ಬಳಿ ಜಗ್ಗೇಶ್ ಸಂಬಂಧಿ ಮಾದೇಗೌಡ ಎಂಬವರು ಪಾನಿಪುರಿ ವ್ಯಾಪಾರ ಮಾಡುತ್ತಾರೆ. ಅಲ್ಲಿಗೆ ಬಂದ ರವಿಕುಮಾರ್ ಹಾಗೂ ಕೆಲ ಸಂಗಡಿಗರು ಕಿರಿಕ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾದೇಗೌಡರು, ನಟ ಜಗ್ಗೇಶ್ ಗೆ ಫೋನ್ ಮಾಡಿ ಘಟನೆಯ ಕುರಿತು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಲೇ ಮಲ್ಲೇಶ್ವರಂನ ಸ್ಥಳೀಯ ಕಾರ್ಪೊರೇಟರ್ ಮಂಜುನಾಥ್ ಅವರ ಜೊತೆ ಸ್ಥಳಕ್ಕೆ ಬಂದ ಜಗ್ಗೇಶ್ ಈ ಕುರಿತು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ತಳ್ಳಾಟ-ನೂಕಾಟ ನಡೆದಿದ್ದು, ಜಗ್ಗೇಶ್ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಮಾಧ್ಯಮಕ್ಕೆ ಮಿತ್ರರಿಗೆ ಮಾಹಿತಿ.. https://t.co/eBSuonO9FA
— ನವರಸನಾಯಕ ಜಗ್ಗೇಶ್ (@Jaggesh2) April 7, 2018