ಮೋದಿ ವಿರುದ್ಧ ತಿರುಗಿ ಬಿದ್ದಿಲ್ಲ: ಜಗ್ಗೇಶ್ ಸ್ಪಷ್ಟನೆ

Public TV
2 Min Read
modi jaggesh

ಬೆಂಗಳೂರು: ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಿರುಗಿ ಬಿದ್ದಿಲ್ಲ ಎಂದು ನವರಸನಾಯಕ ಜಗ್ಗೇಶ್ ಭಾನುವಾರ ಮಾಡಿದ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ರಾತ್ರಿ ಬಾಲಿವುಡ್ ಮಂದಿಯ ಜೊತೆಗೆ ಸಂವಾದ ನಡೆಸಿದ ಮೋದಿಯ ನಿಲುವನ್ನು ಜಗ್ಗೇಶ್ ಪ್ರಶ್ನಿಸಿದ್ದರು. ಈ ವಿಚಾರವಾಗಿ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದ ಟ್ರೈಲರ್ ಲಾಂಚ್ ವೇಳೆ ಜಗ್ಗೇಶ್ ಮಾತನಾಡಿದ್ದಾರೆ.  ಇದನ್ನು ಓದಿ: ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

vlcsnap 2019 10 22 17h13m01s144

ನಾನು ಒಂದು ವಿಷಯವನ್ನು ಹೇಳಿದೆ. ಅದು ಜನರಿಗೆ ಸರಿಯಾಗಿ ಅರ್ಥ ಆಗಿಲ್ಲ. ಚಿತ್ರರಂಗ ಎಂದರೆ ಬಹುಭಾಷಾ ರಂಗ, ಅದರಲ್ಲಿ ಒಕ್ಕೂಟವಿದೆ. ಎಲ್ಲಾ ರಾಜ್ಯದವರನ್ನು ಕರೆಸಿ ಮಾತನಾಡಿದರೆ ಅದ್ಭುತ ಚರ್ಚೆಯಾಗುತ್ತೆ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಆದರೆ ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನರೇಂದ್ರ ಮೋದಿಯಂತಹ ನಾಯಕರು ಸಿಗುವುದು ನಮ್ಮ ಪುಣ್ಯ. ಅವರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಪ್ರಯತ್ನ ಪಟ್ಟೆ ಹೊರತು, ಅವರ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ನಮ್ಮಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಲೆಟರ್ ಬರೆಯುವುದಕ್ಕೆ ಮನವಿಯನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗ ಖಾನ್‍ಗಳದ್ದಲ್ಲ- ಮೋದಿ ವಿರುದ್ಧ ಜಗ್ಗೇಶ್ ಗರಂ

ಜಗ್ಗೇಶ್ ಟ್ವೀಟ್ ಮಾಡಿದ್ದೇನು?
ನಟ ಜಗ್ಗೇಶ್ ಭಾನುವಾರ ಎರಡು ಟ್ವೀಟ್ ಮಾಡಿದ್ದರು. ಮೊದಲ ಟ್ವೀಟ್‍ನಲ್ಲಿ, “ಕನ್ನಡಿಗರು ಇಂದು ಬಹುತೇಕ ಪರಭಾಷೆಗಳ ಸ್ಟಾರ್ ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ. ನರೇಂದ್ರ ಮೋದಿ ಜೀ ಉತ್ತರ ಭಾರತದ ನಟ-ನಟಿಯರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲ. ಕಲಾರಂಗಕ್ಕೆ ಶಾರೂಖ್, ಅಮೀರ್ ಒಡೆಯರಲ್ಲ. ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ. ನಿಮ್ಮ ಭಾವನೆ ಗೌರವಿಸುತ್ತೇನೆ ಜೈಹಿಂದ್” ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಟ್ವೀಟ್‍ನಲ್ಲಿ, ಇಂದು ಕರ್ನಾಟಕದಲ್ಲಿ ಹೆಚ್ಚು ತೆರಿಗೆ ಸಂಗ್ರಹ ಕನ್ನಡದ ನೆಲ ಚಿತ್ರರಂಗದಿಂದ ನಟರಿಂದ ಆಗುತ್ತಿದೆ ನೆನಪಿಡಿ. ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ರಾಷ್ಟ್ರಕ್ಕೆ ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ತುಂಬಾ ದುಃಖವಾಯಿತು ಖಾನ್ ಗಳಲ್ಲ ಚಿತ್ರರಂಗ ಎಂದು ಬರೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *