ಬೆಂಗಳೂರು: ನಟ ಜಗ್ಗೇಶ್ ಅವರ ಮಾವರ ಮನೆಯಲ್ಲಿದ್ದ ನಾಯಿ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಅದು ಸಾಯುವ ಮುನ್ನ ಹಾವನ್ನು ಕೊಂದು ಕೊನೆಯುಸಿರೆಳೆಯಿತು ಎಂದು ಜಗ್ಗೇಶ್ ಹೇಳಿದ್ದಾರೆ.
ಜಗ್ಗೇಶ್ ಪತ್ನಿ ಪರಿಮಳ ಅವರ ತಂದೆ ಪ್ರೀತಿಯಿಂದ `ರೂಟ್ವೆಲ್’ ಎಂಬ ನಾಯಿಯನ್ನು ಸಾಕಿದ್ದರು. ಆದರೆ ಅವರ ತೋಟದ ಮನೆಯಲ್ಲಿ ರುಸ್ಸುಲ್ ಎಂಬ ವಿಷಕಾರಿ ಹಾವು ನಾಯಿಯನ್ನು ಕಚ್ಚಿ ಸಾವನ್ನಪ್ಪಿದೆ. ಈ ಬಗ್ಗೆ ನಟ ಜಗ್ಗೇಶ್ ಫೋಟೋ ಹಾಕಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಟ್ವೀಟ್ನಲ್ಲೇನಿದೆ?
“ಪರಿಮಳನ ತಂದೆಯ ಪ್ರೀತಿಯಿಂದ ರೂಟ್ವೆಲ್ ಎಂಬ ನಾಯಿಯನ್ನು ಚೆನ್ನೈ ತೋಟದ ಮನೆಯಲ್ಲಿ ಸಾಕಿದ್ದರು. ಆ ನಾಯಿಗೆ ರುಸ್ಸುಲ್ ವಿಷಕಾರಿ ಹಾವು ಕಚ್ಚಿದೆ. ಆದರೆ ನಾಯಿ ಸಾಯುವ ಮುನ್ನ ಹಾವನ್ನು ಕೊಂದು ತಾನೂ ಕೊನೆಯುಸಿರೆಳೆದಿದೆ. ಪರಿಮಳ ಅವರ 82 ವರ್ಷದ ಅಪ್ಪ ನೆಚ್ಚಿನ ನಾಯಿ ಕಳೆದುಕೊಂಡು ಮಗುವಂತೆ ಅಳುತ್ತಿದ್ದರು. ಅವರನ್ನು ಸಂತೈಸಲು ಪರಿಮಳ ಚೆನ್ನೈಗೆ ತೆರಳಿದ್ದಾರೆ. ಎಷ್ಟೇ ಆದರೂ ಹೆಣ್ಣು ಮಕ್ಕಳು ಅಪ್ಪನ ಮೆಚ್ಚು ಅಲ್ಲವೇ” ಎಂದು ಬರೆದುಕೊಂಡಿದ್ದಾರೆ.
ಪರಿಮಳನ ತಂದೆಯ ಪ್ರೀತಿಯ #rotweel ನಾಯಿಯನ್ನು ಚನೈ ತೋಟದಮನೆಯಲ್ಲಿ ಕಚ್ಚಿದ #russul ವಿಷಕಾರಿ ಹಾವು!ನಾಯಿ ಸಾಯುವ ಮುನ್ನ ಹಾವನ್ನು ಕೊಂದು ತಾನು ಕೊನೆಯುಸಿರು ನಿಲ್ಲಿಸಿತು!82ವರ್ಷದ ಪರಿಮಳ ಅಪ್ಪನ ನೆಚ್ಚಿನ ನಾಯಿ ಕಳೆದುಕೊಂಡು ಮಗುವಂತೆ ಅಳುತ್ತಿದ್ದ ತಂದೆ ಸಂತೈಸಲು ಚನೈಗೆ ಓಡಿಹೋದಳು!
ಎಷ್ಟೇ ಆದರು ಹೆಣ್ಣುಮಕ್ಕಳು ಅಪ್ಪನ ಮೆಚ್ಚು ಅಲ್ಲವೆ! pic.twitter.com/FJ1YTDFGZz
— ನವರಸನಾಯಕ ಜಗ್ಗೇಶ್ (@Jaggesh2) February 22, 2019
ಪರಿಮಳ ಅವರ ತಂದೆ ನಾಯಿಯನ್ನು ಕ್ರಿಶ್ಚಿಯನ್ ರೀತಿ ಶವದ ಪೆಟ್ಟಿಗೆಯಲ್ಲಿ ಮಲಗಿಸಿ, ಹೂ ಹಾಕಿ ವ್ಯಕ್ತಿಗಳ ರೀತಿ ಶವದ ಪೆಟ್ಟಿಗೆಯನ್ನು ಹೂತಿಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv