Connect with us

Bengaluru City

ನನ್ನ ಆತ್ಮೀಯ ಅಲ್ಲಾಹುವಿನ ಪಾದ ಸೇರಿದ-ಎಆರ್ ಬಾಬು ನಿಧನಕ್ಕೆ ಜಗ್ಗೇಶ್ ಕಂಬನಿ

Published

on

ಬೆಂಗಳೂರು: ನಿರ್ದೇಶಕ ಎ.ಆರ್.ಬಾಬು ನಿಧನಕ್ಕೆ ನಟ ಜಗ್ಗೇಶ್ ಕಂಬನಿ ಮಿಡಿದು ಟ್ವೀಟ್ ಮಾಡಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಬು ಅವರು ವಿಧಿವಶರಾಗಿದ್ದರು.

ಜಗ್ಗೇಶ್ ಟ್ವೀಟ್:
ನನ್ನ ಆತ್ಮೀಯ ಸಹೋದರ ನಿರ್ದೇಶಕ ಎ.ಆರ್.ಬಾಬು ಅಲ್ಲಾಹುವಿನ ಪಾದಸೇರಿದ. ಯಾರದೋ ದುಡ್ಡು, ಕಾಸಿದ್ದವನೆ ಬಾಸ್ ಎರಡು ಚಿತ್ರಗಳಲ್ಲಿ ನನ್ನ ಜೊತೆ ಕೆಲಸ ಮಾಡಿದ್ದ. ಚಂದನವನಕ್ಕೆ ನಿರ್ದೇಶಕ ಪ್ರೇಮ್ ನನ್ನು ಪರಿಚಯಿಸಿದ ಮಹನೀಯ. ನಮ್ಮಿಬ್ಬರ ಗೆಳೆತನ 30 ವರ್ಷದ್ದು, ನೋವಿನಿಂದ ಮಿತ್ರನಿಗೆ ವಿದಾಯ ಹೇಳುತ್ತಿದ್ದೇನೆ. ನಿನ್ನ ಆತ್ಮ ಅಲ್ಲಾಹುವಿನಲ್ಲಿ ಲೀನವಾಗಲಿ ಗೆಳೆಯ I Miss Your Friendship #RIP ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಹಲೋ ಯಮ, ಖಳನಾಯಕ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸು, ಸಪ್ನೋಂಕಿ ರಾಣಿ, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕೂಲಿ ರಾಜ, ಮರುಜನ್ಮ ಸಿನಿಮಾಗಳು ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು. ಚಂದನವನದ ಹಿರಿಯ ನಿರ್ದೇಶಕರಾಗಿದ್ದ ಬಾಬು ಅವರ ಗರಡಿಯಲ್ಲಿ ಜೋಗಿ ಪ್ರೇಮ್ ಪಳಗಿದ್ದರು. ನಿರ್ದೇಶಕನ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟ ಮತ್ತು ನಿರ್ದೇಶಕರಾಗಿದ್ದ ಎ.ಆರ್. ಬಾಬು ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಬು ಡಯಾಲಿಸಿಸ್ ಗೆ ಒಳಗಾಗುತ್ತಿದ್ದರಂತೆ. ಅನಾರೋಗ್ಯದಿಂದಾಗಿ ತೀವ್ರವಾಗಿ ಬಳಲಿದ್ದ ಬಾಬು ಅವರು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *