ಕಲಾವಿದರ ಸಂಘದ ಹೋಮ: ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ನಾನು ಬರುತ್ತಿರಲಿಲ್ಲ ಎಂದ ಜಗ್ಗೇಶ್

Public TV
1 Min Read
jaggesh

ಚಿತ್ರರಂಗದ ಏಳಿಗೆಗಾಗಿ ಇಂದು (ಆ.14) ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆಯ ಕಾರ್ಯಕ್ರಮ ಜರುಗಿದೆ. ಈ ಪೂಜೆ ಕಾರ್ಯಕ್ಕೆ ನವರಸನಾಯಕ ಜಗ್ಗೇಶ್ ಕೂಡ ಭಾಗಿಯಾಗಿದ್ದರು. ಈ ವೇಳೆ ಜಗ್ಗೇಶ್ (Jaggesh) ಮಾತನಾಡಿ, ದರ್ಶನ್‌ಗೋಸ್ಕರ (Darshan) ಪೂಜೆ ಮಾಡಿದ್ರೆ ನಾನು ಬರುತ್ತಿರಲಿಲ್ಲ ಎಂದು ಮಾತನಾಡಿದ್ದಾರೆ.

JAGGESH

ಚಿತ್ರರಂಗದ ಏಳಿಗೆಗಾಗಿ ಸರ್ಪ ಶಾಂತಿ, ಅಶ್ಲೇಷ ಬಲಿ ಸೇರಿದಂತೆ ಹಲವು ಪೂಜೆಯ ಕಾರ್ಯವನ್ನು ಮಾಡಲಾಯಿತು. ಈ ವೇಳೆ ದರ್ಶನ್ ಕುರಿತು ಕೇಳಲಾದ ಪ್ರಶ್ನೆಗೆ ಜಗ್ಗೇಶ್ ಪ್ರತಿಕ್ರಿಯಿಸಿ, ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ನಾನು ಬರುತ್ತಿರಲಿಲ್ಲ. ಆದರೆ ಈ ಪೂಜೆ ದರ್ಶನ್‌ಗಾಗಿ ಅಲ್ಲ, ಕಲಾವಿದರ ಒಳಿತಿಗಾಗಿ ಮಾಡಿರೋದು ಎಂದಿದ್ದಾರೆ.

ನನಗೂ ಅನೇಕರು ಇದರ ಬಗ್ಗೆ ಕೇಳಿದ್ರು. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ, ಚಿತ್ರರಂಗದ ಏಳಿಗೆಗಾಗಿ ಎಂದ್ಮೇಲೆ ನಾನು ಭೇಟಿ ಕೊಟ್ಟಿದ್ದು ಎಂದು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

ನಾಗಾರಾಧನೆ ವೇಳೆ, ಒಗ್ಗಟಾಗಿ ಕೆಲಸ ಮಾಡಿ ಎಂದು ನಾಗದೇವರು ಹೇಳಿದ್ದರು ಎಂದಿದ್ದಾರೆ. ನಾವು ಆದ್ಯಾತ್ಮಿಕವಾಗಿ ಇದ್ದೇವೆ. ಕೆಲವರಿಗೆ ದೇವರು ಎಂದರೆ ಆಗಲ್ಲ. ದೇವರು ನಂಬಿರುವವರ ಬೆಳವಣಿಗೆ ಹೇಗಿದೆ, ನಂಬದೇ ಇರುವವರ ಬೆಳವಣಿಗೆ ಹೇಗಿದೆ ನೋಡಿ ಎಲ್ಲರಿಗೂ ಅಲ್ಲೇ ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತನಾಡಿದ್ದಾರೆ.

Share This Article