ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

Public TV
1 Min Read
jagapathi babu

ಹೈದರಾಬಾದ್: ನಾನು ನಟಿ ಸೌಂದರ್ಯ ಅವರ ಜೊತೆ ಸಂಬಂಧ ಹೊಂದಿದ್ದೆ ಎಂದು ಟಾಲಿವುಡ್‍ನ ಖ್ಯಾತ ಖಳನಟ ಜಗಪತಿ ಬಾಬು ಅವರು ಹೇಳಿದ್ದಾರೆ.

ಕನ್ನಡ, ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಅವರು 2004ರಲ್ಲಿ ಅಗಲಿದ್ದಾರೆ. ಆದರೆ ನಟಿ ಸೌಂದರ್ಯ ಜಗಪತಿ ಬಾಬು ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಸ್ವತಃ ಜಗಪತಿ ಬಾಬು ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Eduruleni Manishi

ಇತ್ತೀಚೆಗೆ ಮಾಧ್ಯಮಗಳ ಸಂವಾದದ ವೇಳೆ ಮಾತನಾಡಿದ ನಟ ಜಗಪತಿ, ಸೌಂದರ್ಯ ಅವರ ಜೊತೆ ಸಂಬಂಧ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

“ಹೌದು, ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು. ನಾನು ಮತ್ತು ಸೌಂದರ್ಯ ಅವರ ಸಹೋದರ ಉತ್ತಮ ಸ್ನೇಹಿತರಾಗಿದ್ದೆವು. ಆದ್ದರಿಂದ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಈ ವೇಳೆ ಸೌಂದರ್ಯ ಅವರನ್ನ ಭೇಟಿ ಮಾಡುತ್ತಿದ್ದೆ. ಆದರೆ ಜನರು ಅವರ ಬಗ್ಗೆ ತಪ್ಪಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಸಂಬಂಧದ ಬಗ್ಗೆ ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ.

8 2

ಸಾಮಾನ್ಯವಾಗಿ ಜನರು ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸುತ್ತಾರೆ. ಆದರೆ ನಮ್ಮಿಬ್ಬರ ಸಂಬಂಧ ವಿಭಿನ್ನವಾಗಿತ್ತು. ನಮ್ಮಿಬ್ಬರ ಮಧ್ಯೆ ಉತ್ತಮ ಭಾಂದವ್ಯವಿತ್ತು. ಅದು ಅವರೊಂದಿಗಿನ ನನ್ನ ಸಂಬಂಧ” ಎಂದು ಸ್ಪಷ್ಟ ಪಡಿಸಿದ್ದಾರೆ.

‘ರೈತು ಭಾರತಂ’ ಸಿನಿಮಾದ ಮೂಲಕ ಸೌಂದರ್ಯ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಸೌಂದರ್ಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಹಿಂದಿ ಸಿನಿಮಾದಲ್ಲೂ ಅಭಿನಯಸಿದ್ದಾರೆ. ಅವರು2004ರಲ್ಲಿ ಬಿಡುಗಡೆಯಾದ ‘ಆಪ್ತಮಿತ್ರ’ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಸದ್ಯಕ್ಕೆ ನಟ ಜಗಪತಿ ಬಾಬು ಸ್ಯಾಂಡಲ್‍ವುಡ್‍ನ ‘ರಾಬರ್ಟ್’ ಮತ್ತು ಉಪ್ಪಿ ರೂಪೀ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *